Watch Video | ಯುವಕರಿಗೆ ಜೀವನೋತ್ಸಾಹದ ಗೋಲ್ ಸೃಷ್ಟಿಸಿದ ಹಿರಿಯ ಜೀವದ ಮಸ್ತ್‌ ಡ್ಯಾನ್ಸ್

ನೀವೇನಾದರೂ ಜೀವನೋತ್ಸಾಹದ ನಿದರ್ಶನಗಳನ್ನು ನೋಡಬೇಕೆಂದುಕೊಡರೆ ಈ ವಿಡಿಯೋವನ್ನೊಮ್ಮೆ ವೀಕ್ಷಿಸಿ. ಮುಂಬೈ ಲೋಕಲ್ ರೈಲೊಂದರಲ್ಲಿ ಪ್ರಯಾಣಿಕರು ಹಾಡಿದ ಹಾಡೊಂದಕ್ಕೆ ಹಿರಿಯ ವ್ಯಕ್ತಿಯೊಬ್ಬರು ಭಾರೀ ಉಲ್ಲಾಸದಿಂದ ನಿಂತಲ್ಲೇ ಸ್ಟೆಪ್ ಹಾಕಿದ್ದಾರೆ.

ಪ್ರಯಾಣಿಕರು ’ಓ ಮೇರೆ ದಿಲ್ ಕೇ ಚೇನ್’ ಹಾಡಿಗೆ ಈ ಹಿರಿಯ ಪುರುಷನ ಹೆಜ್ಜೆಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಲಾಗಿದೆ.

ಪ್ರತಿನಿತ್ಯದ ಕೆಲಸದ ಮೇಲೆ ಕಚೇರಿಗಳಿಗೆ ಈ ಲೋಕಲ್ ರೈಲುಗಳಲ್ಲಿ ಓಡಾಡುವ ಮಂದಿ ತಂತಮ್ಮ ವೇಳಾಪಟ್ಟಿಯಲ್ಲಿ, ತಂತಮ್ಮ ಮಾರ್ಗಗಳಲ್ಲಿ ಬರುವ ಇತರ ಪ್ರಯಾಣಿಕರೊಡನೆ ಸ್ನೇಹ ಬೆಳೆಸಿಕೊಂಡು ಪರಸ್ಪರ ಸಲುಗೆಯನ್ನೂ ಬೆಳೆಸಿಕೊಂಡಿರುತ್ತಾರೆ. ಎಲ್ಲರೂ ಮಾತನಾಡಿಕೊಂಡು ಅದದೇ ಕೋಚ್‌ಗಳನ್ನು ಏರುವ ಮೂಲಕ ಆವತ್ತಿನ ಕೆಲಸ ಮುಗಿಸಿ ಮನೆಗೆ ಹೋಗುವ ಖುಷಿಯಲ್ಲಿ ಹಾಗೇ ಹರಟುತ್ತಾ ಸಾಗುತ್ತಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read