ಸಂಭ್ರಮದಿಂದ ಬದುಕಿನ ಖುಷಿ ಕ್ಷಣಗಳನ್ನು ಅನುಭವಿಸಲು ವಯಸ್ಸಿನ ಮಿತಿಯಿಲ್ಲ. ಎಳೆಯ ವಯಸ್ಸಿನವರಿಂದ ಹಿಡಿದು ಇಳಿವಯಸ್ಸಿನವರು ಕೂಡ ಜೀವನದ ವಿಶೇಷ ಕ್ಷಣಗಳನ್ನು ಅನುಭವಿಸಲು ಮುಂದಾಗಬೇಕು. ಆಗ ಮಾತ್ರ ಬದುಕಿನ ಪ್ರತಿ ಕ್ಷಣಗಳು ಹೊಸತನವನ್ನು ನೀಡುತ್ತವೆ,
ಜೀವನೋತ್ಸಾಹ ಮೂಡಿಸುತ್ತವೆ. ಇಳಿವಯಸ್ಸಿನಲ್ಲೂ ಮಳೆನೀರಲ್ಲಿ ನಲಿದ ವೃದ್ಧಜೋಡಿಯ ವಿಡಿಯೋ ವೈರಲ್ ಆಗಿದ್ದು ಅವರ ಜೀವನೋತ್ಸಾಹಕ್ಕೆ ಸಾಕ್ಷಿಯಾಗಿದೆ.
ವಯಸ್ಸಾದ ದಂಪತಿ ಮಳೆಯಲ್ಲಿ ರಿಮ್ ಜಿಮ್ ಘಿರೆ ಸಾವನ್ ಹಾಡಿನ ದೃಶ್ಯವನ್ನು ಮರುಸೃಷ್ಟಿಸಿದ್ದಾರೆ. ಹಾಡು ಚಿತ್ರೀಕರಣಗೊಂಡಿದ್ದ ಮುಂಬೈನ ಸ್ಥಳದಲ್ಲೇ ಅದನ್ನು ಮರುಸೃಷ್ಟಿಸಿದ್ದಾರೆ.
ಈ ಕ್ಲಿಪ್ ಅನ್ನು ಉದ್ಯಮಿ ಆನಂದ್ ಮಹೀಂದ್ರಾ ಕೂಡ ಹಂಚಿಕೊಂಡಿದ್ದಾರೆ.
ದಂಪತಿಯ ಉತ್ಸಾಹವನ್ನು ನೆಟ್ಟಿಗರು ಮೆಚ್ಚಿಕೊಂಡು ಕೊಂಡಾಡಿದ್ದಾರೆ.
ರಿಮ್ ಜಿಮ್ ಘಿರೆ ಸಾವನ್ ಹಾಡಿನಲ್ಲಿ ಅಮಿತಾಬ್ ಬಚ್ಚನ್ ಮತ್ತು ಮೌಸುಮಿ ಚಟರ್ಜಿ ನಟಿಸಿದ್ದಾರೆ ಮತ್ತು ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಅವರು ಧ್ವನಿ ನೀಡಿದ್ದಾರೆ.
https://twitter.com/anandmahindra/status/1675460712439717888?ref_src=twsrc%5Etfw%7Ctwcamp%5Etweetembed%7Ctwterm%5E1675460712439717888%7Ctwgr%5Eb44bc00763b658b38fd2a9cd9357cd0c11b695e2%7Ctwcon%5Es1_&ref_url=https%3A%2F%2Fd-18157051753803410049.ampproject.net%2F2306202201000%2Fframe.html
https://twitter.com/DrPavanSonar/status/1675513890703286272?ref_src=twsrc%5Etfw%7Ctwcamp%5Etweetembed%7Ctwterm%5E16755138907032862
https://twitter.com/preetiparab11/status/1675512021994053633?ref_src=twsrc%5Etfw%7Ctwcamp%5Etweetembed%7Ctwterm%5E1675512021994053633%7Ctwgr%5E9de8dbde4f9f47884c8a44e022db6328b50482e2%7Ctwcon%5Es1_&ref_url=https%3A%2F%2Fd-18157051753803410049.ampproject.net%2F2306202201000%2Fframe.html