ʼತೂಕʼ ಎತ್ತಿದ ಬಳಿಕ ಫಜೀತಿ ; 165 ಕೆಜಿ ತೂಕದಡಿ ಸಿಲುಕಿದ ದೇಹದಾರ್ಢ್ಯ ಪಟು | Watch Video

ದೇಹದಾರ್ಢ್ಯ ಪಟುವೊಬ್ಬರು 165 ಕೆಜಿ ತೂಕವನ್ನು ಎತ್ತಲು ಪ್ರಯತ್ನಿಸಿ ನಿಯಂತ್ರಣ ಕಳೆದುಕೊಂಡು ತೂಕದಡಿ ಸಿಲುಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವ್ಯಕ್ತಿಯೊಬ್ಬರು ಪವರ್‌ಲಿಫ್ಟಿಂಗ್ ಚಾಲೆಂಜ್‌ನಲ್ಲಿ 165 ಕೆಜಿ ತೂಕವನ್ನು ಎತ್ತಲು ಪ್ರಯತ್ನಿಸಿದ್ದು, ಮಹಿಳೆಯೊಬ್ಬರು ತೂಕವನ್ನು ಮೇಲಕ್ಕೆತ್ತಲು ಸಹಾಯ ಮಾಡಿದರು.

ಆದರೆ, ಅವರು ಹೋದ ನಂತರ ಪರಿಸ್ಥಿತಿ ಅಪಾಯಕಾರಿಯಾಗಿದ್ದು, ಅವರು ತೂಕವನ್ನು ಒಂದು ಬಾರಿ ಎತ್ತಲು ಯಶಸ್ವಿಯಾದರು,

ಆದರೆ ಮುಂದಿನ ಪ್ರಯತ್ನದಲ್ಲಿ ತೂಕ ಜಾರಿ ಅವರ ಕುತ್ತಿಗೆಗೆ ಬಿದ್ದಿದೆ. ಇದರಿಂದ ಅವರು ತೂಕದಡಿ ಸಿಲುಕಿ ಸಹಾಯಕ್ಕಾಗಿ ಮೊರೆ ಹೋದರಾದರೂ ಮಹಿಳೆ ಹೊರತುಪಡಿಸಿ ತಕ್ಷಣಕ್ಕೆ ಬೇರೆ ಯಾರೂ ಸಹಾಯಕ್ಕೆ ಬರದ ಕಾರಣ, ವ್ಯಕ್ತಿ ತೂಕದಡಿ ಸಿಲುಕಿಕೊಂಡಿದ್ದರು.

ಇದರ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇಂತಹ ಪ್ರಯತ್ನ ಮಾಡುವಾಗ ಜೊತೆಯಲ್ಲಿ ಯಾರಾದರೂ ಇರಬೇಕೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read