ಬೆಂಗಳೂರು: ಶ್ರಾವಣ ಮಾಸ ಶುರುವಾದ ಬಳಿಕ ಮೊಟ್ಟೆ ದರ ಭಾರಿ ಕುಸಿತ ಕಂಡಿದೆ. ಶ್ರಾವಣ ಮಾಸ ಆರಂಭದೊಂದಿಗೆ ಹಬ್ಬಗಳ ಸಾಲು ಶುರುವಾಗುತ್ತದೆ. ಈ ಮಾಸದಲ್ಲಿ ಬಹುತೇಕರು ಮೊಟ್ಟೆ, ಮಾಂಸಹಾರ ಸೇವಿಸುವುದಿಲ್ಲ.
ಹೀಗಾಗಿ ಮೊಟ್ಟೆ ದರ ಕಡಿಮೆಯಾಗಿದೆ. ಜುಲೈ 2ರಂದು 100 ಮೊಟ್ಟೆಗೆ 620 ರೂ. ಇದ್ದ ಸಗಟು ದರ ಆಗಸ್ಟ್ 2ರಂದು 485 ರೂ.ಗೆ ಇಳಿಕೆಯಾಗಿದೆ. ಒಟ್ಟು 135 ರೂಪಾಯಿಯಷ್ಟು ಕಡಿಮೆಯಾಗಿದೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಮೊಟ್ಟೆ ದರ ಕಡಿಮೆಯಾಗುತ್ತದೆ.
ಚಿಲ್ಲರೆ ಮಾರಾಟ ದರ ಒಂದು ಮೊಟ್ಟೆಗೆ 6ರಿಂದ 6.5 ರೂಪಾಯಿಯಷ್ಟು ಇದೆ. ಈ ದರ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ. ಅಲ್ಲದೇ ಚಿಕನ್ ದರ ಕೂಡ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.