Indira Canteen : ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ ‘ಇಂದಿರಾ ಕ್ಯಾಂಟೀನ್’ ನಲ್ಲಿ ಊಟದ ಜೊತೆ ಸಿಗುತ್ತೆ ಮೊಟ್ಟೆ

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಇಂದಿರಾ ಕ್ಯಾಂಟೀನ್ ಗೆ ( Indira Canteen )  ಹೊಸ ಜೀವಬಂದಂತಾಗಿದೆ. ಬಡವರ ಫೈ ಸ್ಟಾರ್ ಇಂದಿರಾ ಕ್ಯಾಂಟೀನ್ ನಲ್ಲಿ ಶುಚಿಕರ ಊಟದ ಜೊತೆಗೆ ವೆರೈಟಿ ತಿಂಡಿ ಹಾಗೂ ಊಟ ನೀಡಲು ಕೂಡ ಚಿಂತನೆ ನಡೆಸಲಾಗಿದೆ.

ಇದೀಗ ಇಂದಿರಾ ಕ್ಯಾಂಟೀನ್ ನಲ್ಲಿ ಊಟದ ಜೊತೆಗೆ ಮೊಟ್ಟೆ ಕೊಡಲು ಕೂಡ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಉತ್ತಮ ಪೌಷ್ಟಿಕಾಂಶಕ್ಕೆ ಮೊಟ್ಟೆ ಬೆಸ್ಟ್ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನಲೆ ವಾರದಲ್ಲಿ ಮೂರು ದಿನವಾದರೂ ಕೋಳಿ ಮೊಟ್ಟೆ ನೀಡುವಂತೆ ಕಾಂಗ್ರೆಸ್ ಪಾಲಿಕೆ ಸದಸ್ಯರು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಸರ್ಕಾರ ಕೂಡ ಇಂದಿರಾ ಕ್ಯಾಂಟೀನ್ ನಲ್ಲಿ ಮೊಟ್ಟೆ ಕೊಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಕೆಲವೊಂದಿಷ್ಟು ಬದಲಾವಣೆಗಳೊಂದಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉತ್ತಮ ಶುಚಿಕರವಾದ ಊಟ ತಿಂಡಿ ನೀಡಲು ಸರ್ಕಾರ ಸಿದ್ದತೆ ನಡೆಸುತ್ತಿದ್ದು, ಶೀಘ್ರದಲ್ಲೇ ಫೈನಲ್ ಆಗಲಿದೆ. ಸರ್ಕಾರ ನೀಡಿದ ಸೂಚನೆಯಂತೆ ಬಿಬಿಎಂಪಿ 198 ರಿಂದ 250 ಕ್ಕೆ ಇಂದಿರಾ ಕ್ಯಾಂಟೀನ್ ಗಳನ್ನು ಹೆಚ್ಚಳ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read