ವಿದ್ಯುತ್ ಗ್ರಾಹಕರಿಗೆ ಶಾಕ್: KPTCL, ಎಸ್ಕಾಂ ನಿವೃತ್ತ ನೌಕರರ ಪಿಂಚಣಿ, ಸೌಲಭ್ಯ ವೆಚ್ಚ ಗ್ರಾಹಕರಿಗೆ ಹೊರಿಸಲು ಯತ್ನ

ಬೆಂಗಳೂರು: ಉದ್ಯೋಗಿಗಳ ಪಿಂಚಣಿ ಮತ್ತು ನಿವೃತ್ತಿ ನಂತರದ ಸೌಲಭ್ಯಗಳ ವೆಚ್ಚವನ್ನು ಗ್ರಾಹಕರಿಗೆ ಹೊರಿಸಲು ತೆರೆಮರೆಯಲ್ಲಿ ಯತ್ನ ನಡೆಯುತ್ತಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್) ಮತ್ತು ವಿದ್ಯುತ್ ವಿತರಣಾ ಸಂಸ್ಥೆಗಳ(ಎಸ್ಕಾಂ) ಉದ್ಯೋಗಿಗಳ ಪಿಂಚಣಿ, ನಿವೃತ್ತಿ ಸೌಲಭ್ಯಗಳನ್ನು ಗ್ರಾಹಕರಿಗೆ ಹೊರಿಸಲು ಚಿಂತನೆ ನಡೆದಿದೆ. ಸರ್ಕಾರವೇ ಕಳೆದ ಎರಡು ದಶಕಗಳಿಂದ ಈ ವೆಚ್ಚ ಭರಿಸುತ್ತಿತ್ತು. ಇದೀಗ ನಿವೃತ್ತ ನೌಕರರ ಪಿಂಚಣಿ, ನಿವೃತ್ತಿ ನಂತರದ ಸೌಲಭ್ಯ ಭರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ವೆಚ್ಚವನ್ನು ಗ್ರಾಹಕರ ಖಾತೆಗೆ ವರ್ಗಾಯಿಸಲು ಯತ್ನ ನಡೆದಿದೆ.

ವಿದ್ಯುತ್ ದರ ಪರಿಷ್ಕರಣೆ ಕುರಿತಾಗಿ ಇಂದಿನಿಂದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿಚಾರಣೆ ನಡೆಸಲಿದೆ. ಈ ಸಂದರ್ಭದಲ್ಲಿ ಪಿಂಚಣಿ, ಇನ್ನಿತರೆ ಸೌಲಭ್ಯಗಳ ವೆಚ್ಚ, ವಿದ್ಯುತ್ ದರ ಪರಿಷ್ಕರಣೆ ಗ್ರಾಹಕರ ಖಾತೆಗೆ ಸೇರಿಸುವಂತೆ ಪ್ರಸ್ತಾಪಿಸಲು ಮುಂದಾಗಿದೆ. ನೌಕರರ ಪಿಂಚಣಿ ಮತ್ತು ಇತರೆ ವೆಚ್ಚವನ್ನು ಸರ್ಕಾರವೇ ಭರಿಸಬೇಕಿದೆ. ಆದರೆ, ಸರ್ಕಾರ ವೆಚ್ಚ ಭರಿಸಲು ಸಾಧ್ಯವಿಲ್ಲವೆಂದು ಹೇಳಿರುವುದರಿಂದ ಗ್ರಾಹಕರಿಗೆ ಹೊರಿಸಲು ಚಿಂತನೆ ನಡೆದಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read