ಶೈಕ್ಷಣಿಕ ಸಹಾಯಧನ : ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ 2022-23ನೇ ಸಾಲಿನ ಪ್ರಿಮೆಟ್ರಿಕ್ ಹಾಗೂ ಪೋಸ್ಟ್ಮೆಟ್ರಿಕ್ ಶೈಕ್ಷಣಿಕ ಸಹಾಯಧನಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ ಅರ್ಹ ವಿದ್ಯಾರ್ಥಿಗಳು ತಮ್ಮ ಅರ್ಜಿಯೊಂದಿಗೆ, ವಿದ್ಯಾರ್ಥಿಗಳ ಸ್ಯಾಟ್/ ಸ್ಟುಡೆಂಟ್ ಐಡಿ, ಪೋಷಕರ ಕಾರ್ಮಿಕರ ಗುರುತಿನ ಹಾಗೂ ದೂರವಾಣಿ ಸಂಖ್ಯೆಯನ್ನು ಅಪ್‌ಡೆಟ್ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.     

ಶೈಕ್ಷಣಿಕ ಸಹಾಯಧನಕ್ಕಾಗಿ (ಪ್ರಿ-ಮೆಟ್ರಿಕ್ & ಪೋಸ್ಟ್ ಮೆಟ್ರಿಕ್ ಎರಡೂ ಸೇರಿ) ಸೇವಾಸಿಂದು ತಂತ್ರಾಂಶದ ಮೂಲಕ ಸ್ವೀಕೃತವಾದ ಅರ್ಜಿಗಳು ಸ್ವೀಕೃತಗೊಂಡಿರುತ್ತದೆ. ಈ ಸ್ವೀಕರಿಸಿದ ಅರ್ಜಿಗಳಲ್ಲಿ ಎಸ್.ಎಸ್.ಪಿ. ಹಾಗೂ ಶಿಕ್ಷಣ ಇಲಾಖೆಯಿಂದ ಮೌಲೀಕರಿಸಿ ಅನುಮೋದನೆಗೊಂಡ ಅರ್ಜಿಗಳನ್ನು ಡಿಬಿಟಿ ತಂತ್ರಾಂಶದ ಮೂಲಕ ಪಾವತಿಸಲಾಗಿರುತ್ತದೆ ಹಾಗೂ ಬಾಕಿ ಉಳಿದಿರುವ ಅರ್ಜಿಗಳಲ್ಲಿ ಸ್ಯಾಟ್/ ಸ್ಟುಡೆಂಟ್ ಐಡಿಗಳು ತಪ್ಪಾಗಿ ನಮೂದಿಸಿರುವುದರಿಂದ, ಅಂತಹ ಅರ್ಜಿಗಳನ್ನು ಕಾರ್ಮಿಕ ನಿರೀಕ್ಷಕರ ಲಾಗಿನ್‌ಗೆ ನೂತನ ತಂತ್ರಾಂಶದ ಮೂಲಕ ಕಳುಹಿಸಲಾಗಿರುತ್ತದೆ.

ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಸಂಬಂಧಪಟ್ಟ ಕಾರ್ಮಿಕ ನಿರೀಕ್ಷಕರುಗಳ ಕಚೇರಿಗೆ ಹಾಗೂ ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಜನವರಿ 14ರ ಒಳಗಾಗಿ ಶೈಕ್ಷಣಿಕ ಧನಸಹಾಯಕ್ಕಾಗಿ ಸಲ್ಲಿಸಿದ ಅರ್ಜಿ, ವಿದ್ಯಾರ್ಥಿಗಳ ಸ್ಯಾಟ್/ ಸ್ಟುಡೆಂಟ್ ಐಡಿ, ಪೋಷಕರ ಕಾರ್ಮಿಕರ ಗುರುತಿನ ಚೀಟಿಯನ್ನು ಅಪ್‌ಡೆಟ್‌ಗೆ ಸಲ್ಲಿಸಲು ಈ ಮೂಲಕ ಸೂಚಿಸಲಾಗಿದೆ ಹಾಗೂ ಈ ದಿನಾಂಕದ ನಂತರ ಸ್ವೀಕೃತವಾಗುವ ಯಾವುದೇ ಅಪ್‌ಡೇಟ್‌ಗೆ ಬಂದಂತಹ ಅರ್ಜಿಗಳನ್ನು ಶೈಕ್ಷಣಿಕ ಧನಸಹಾಯದ ಮಂಜೂರಾತಿಗೆ ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read