BIG NEWS : ರಾಜ್ಯದ ಶಾಲೆಗಳಿಗೆ ‘ಸ್ಥಳೀಯ ರಜೆ’ ನೀಡುವ ಕುರಿತು ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ |School Holiday

ಬೆಂಗಳೂರು : ರಾಜ್ಯದ ಶಾಲೆಗಳಿಗೆ ಸ್ಥಳೀಯ ರಜೆ ನೀಡುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ. ಶಾಲಾ ವಿದ್ಯಾರ್ಥಿಗಳ ಅವಶ್ಯಕತೆಗನುಸಾರವಾಗಿ ವರ್ಷಕ್ಕೆ ’04’ ದಿನಗಳು ಮೀರದಂತೆ ಶಾಲೆಗಳಿಗೆ ಸ್ಥಳೀಯ ರಜೆಯನ್ನು ಅನುಮೋದಿಸಲು ತಿಳಿಸಿದೆ.

ಈ ವಿಷಯಕ್ಕೆ ಸಂಬಂದಿಸಿದಂತೆ, ಉಲ್ಲೇಖಿತ ಮಾನ್ಯ ಶಾಸಕರ ಪತ್ರದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಶಾಲೆಗೆ ನೀಡುವ ಸ್ಥಳೀಯ ರಜೆಯು ಶೈಕ್ಷಣಿಕ ವರ್ಷಕ್ಕೆ ನಾಲ್ಕು ನೀಡಬಹುದಾಗಿದೆ ಎಂದು ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ತಿಳಿಸಲಾಗಿದೆ. ಆದರೆ ಸ್ಥಳೀಯ ರಜೆಯ ವರ್ಗೀಕರಣ ಹೇಗೆ ಮಾಡಬೇಕೆಂದು ಸ್ಪಷ್ಟವಾಗಿ ತಿಳಿಸಿರುವುದಿಲ್ಲ, ಇದರರ್ಥವೇನೆಂದರೆ ಸ್ಥಳೀಯ ರಜೆಯನ್ನು ಶೈಕ್ಷಣಿಕ ವರ್ಷದಲ್ಲಿ ತಿಂಗಳಿಗೆ ಎಷ್ಟು ನೀಡಬಹುದು, ಕೆಲವೊಮ್ಮೆ ಧಾರ್ಮಿಕ ಹಬ್ಬಗಳು ಒಂದೇ ತಿಂಗಳಲ್ಲಿ 2 ಹಬ್ಬಗಳು ಬಂದಲ್ಲಿ ಉದಾಹರಣೆಗೆ ಹೇಳುವುದಾದರೆ ಈ ತಿಂಗಳಲ್ಲಿ (ಜುಲೈ-25) 08/08/2025 ರಂದು ವರಮಹಾಲಕ್ಷ್ಮಿ & 26/08/2025ರಂದು ಸ್ವರ್ಣಗೌರಿ ವ್ರತ ಹಬ್ಬಗಳಿದ್ದು ಈ ಸಂದರ್ಭದಲ್ಲಿ ತಿಂಗಳಿಗೆ 2 ಸ್ಥಳೀಯ ರಜೆಯನ್ನು ನೀಡಬಹುದೇ ಎಂದು ಸ್ಥಳೀಯ ವರ್ಗೀಕರಣದ ಬಗ್ಗೆ ಸೃಷ್ಟಿಕರಣ ನೀಡುವಂತೆ ಕೋರಿರುತ್ತಾರೆ.

ಈ ಬಗ್ಗೆ ಉಲ್ಲೇಖ (2)ರ ಈ ಕಛೇರಿ ಜ್ಞಾಪನದಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳನ್ನು ನಿಗಧಿಪಡಿಸುವ ಬಗ್ಗೆ ಜ್ಞಾಪನವನ್ನು ಹೊರಡಿಸಲಾಗಿದೆ. ಹಾಗೂ ಸದರಿ ಜ್ಞಾಪನದಲ್ಲಿ ಶಾಲಾ ಸ್ಥಳೀಯ ರಜೆಗಳು 04 ಎಂದು ನಿಗಧಿಪಡಿಸಿದ್ದು ವಿಶೇಷ ಸೂಚನೆಗಳಲ್ಲಿ ಕ್ರಮ ಸಂಖ್ಯೆ 04 ರಲ್ಲಿ ‘ಶಾಲಾ ಸ್ಥಳೀಯ ರಜೆಗಳಿಗೆ ಸಂಬಂಧಿಸಿದಂತೆ ಶಾಲಾವಾರು ನಿರ್ದಿಷ್ಟಪಡಿಸಿದ ದಿನಾಂಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೂರ್ವಭಾವಿಯಾಗಿ ಜೂನ್-2025 ರ ಮೊದಲನೆ ವಾರದಲ್ಲಿ ಅನುಮೋದನೆ ನೀಡುವುದು ಅನುಮೋದಿಸಿದ ದಿನಾಂಕಗಳಿಗೆ ಮಾತ್ರ ಸ್ಥಳೀಯ ರಜೆ ಹೊಂದುವುದು” ಎಂದು ತಿಳಿಸಲಾಗಿದೆ. ಆದ್ದರಿಂದ ಸದರಿ ಅಂಶದಂತೆ ಶಾಲಾ ವಿದ್ಯಾರ್ಥಿಗಳ ಅವಶ್ಯಕತೆಗನುಸಾರವಾಗಿ ವರ್ಷಕ್ಕೆ ’04’ ದಿನಗಳು ಮೀರದಂತೆ ಶಾಲೆಗಳಿಗೆ ಸ್ಥಳೀಯ ರಜೆಯನ್ನು ಅನುಮೋದಿಸಲು ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read