ಅಹಮದಾಬಾದ್: 100 ಕೋಟಿ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ-ಇಡಿ ಗುಜರಾತ್, ಮಹರಾಷ್ಟ್ರದ ಹಲವೆಡೆ ದಾಳಿ ನಡೆಸಿದೆ.
ಡಿಜಿಟಲ್ ಅರೆಸ್ಟ್ ಸೇರಿದಂತೆ ವಿದೇಶಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಮಾಹಿತಿ ಆಧಾರದಲ್ಲಿ ಇಡಿ ಅಧಿಕಾರಿಗಳು, ಗುಜರಾತ್, ಮಹಾರಾಷ್ಟ್ರದ ಹಲವೆಡೆ ದಾಳಿ ನಡೆಸಿದ್ದಾರೆ.
ಸೂರತ್, ಮುಂಬೈ, ಅಹಮದಾಬಾದ್ ನಲ್ಲಿ ದಾಳಿ ನಡೆಸಲಾಗಿದ್ದು, 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಅಹಮದಾಬಾದ್ ನಲ್ಲಿ ಮಕ್ಬುಲ್ ಡಾಕ್ಟರ್, ಕಾಶಿಫ್ ಡಾಕ್ಟರ್, ಮಹೇಶ್ ದೇಸಾಯಿ ಹಾಗೂ ಅಬ್ದುಲ್ ರಹೀಮ್ ನಾದಾ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ.