ಹವಾಲಾ ಆರೋಪದ ಮೇಲೆ ಜೋಯಾಲುಕ್ಕಾಸ್ ನ 305 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ

ನವದೆಹಲಿ: ಕೇರಳ ಮೂಲದ ಜ್ಯುವೆಲ್ಲರಿ ಗ್ರೂಪ್ ಜೋಯಾಲುಕ್ಕಾಸ್‌ನ ಮಾಲೀಕ ಜಾಯ್ ಅಲುಕ್ಕಾಸ್ ವರ್ಗೀಸ್ ಅವರ 305 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಜಪ್ತಿ ಮಾಡಿದೆ, ಕಂಪನಿಯು ಹವಾಲಾ ಮೂಲಕ ದುಬೈಗೆ ದೊಡ್ಡಮಟ್ಟದ ನಗದು ವರ್ಗಾವಣೆ ಮಾಡಿದ ಆರೋಪದ ಮೇಲೆ ಜಪ್ತಿ ಮಾಡಲಾಗಿದೆ.

ತನಿಖಾ ಸಂಸ್ಥೆಯು ಫೆಬ್ರವರಿ 22 ರಂದು ಪ್ರಮುಖ ತ್ರಿಶೂರ್-ಪ್ರಧಾನ ಜ್ಯುವೆಲ್ಲರಿ ಗ್ರೂಪ್‌ನ ಅನೇಕ ಆವರಣದಲ್ಲಿ ಶೋಧ ನಡೆಸಿತ್ತು. ತ್ರಿಶೂರ್‌ನ ಶೋಭಾ ನಗರದಲ್ಲಿ ಭೂಮಿ ಮತ್ತು ವಸತಿ ಕಟ್ಟಡವನ್ನು ಒಳಗೊಂಡಿರುವ 33 ಸ್ಥಿರ ಆಸ್ತಿಗಳು (81.54 ಕೋಟಿ ರೂ. ಮೌಲ್ಯದ್ದು), ಮೂರು ಬ್ಯಾಂಕ್ ಖಾತೆಗಳು(91.22 ಲಕ್ಷ ರೂ.ಠೇವಣಿ ಹೊಂದಿರುವ), 5.58 ಕೋಟಿ ಮೌಲ್ಯದ ಮೂರು ಸ್ಥಿರ ಠೇವಣಿಗಳು ಮತ್ತು ಜೋಯಾಲುಕ್ಕಾಸ್ ಇಂಡಿಯಾದ ಪ್ರೈವೇಟ್ ಲಿಮಿಟೆಡ್ (217.81 ಕೋಟಿ ರೂ. ಮೌಲ್ಯ) ಷೇರುಗಳನ್ನು ಜಪ್ತಿ ಮಾಡಲಾಗಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ(FEMA) ಸೆಕ್ಷನ್ 37A ಅಡಿಯಲ್ಲಿ ಲಗತ್ತಿಸಲಾದ ಈ ಆಸ್ತಿಗಳ ಒಟ್ಟು ಮೌಲ್ಯವು 305.84 ಕೋಟಿ ರೂ. ಆಗಿದೆ.

ಭಾರತದಿಂದ ದುಬೈಗೆ ಹವಾಲಾ ಚಾನೆಲ್‌ ಗಳ ಮೂಲಕ ಬೃಹತ್ ಮೊತ್ತದ ಹಣವನ್ನು ವರ್ಗಾಯಿಸಲಾಗಿದೆ. ನಂತರ ದುಬೈನ ಜೋಯಾಲುಕ್ಕಾಸ್ ಜ್ಯುವೆಲ್ಲರಿ ಎಲ್‌ಎಲ್‌ಸಿಯಲ್ಲಿ ಹೂಡಿಕೆ ಮಾಡಿದೆ. ಇದು ಜಾಯ್ ಅಲುಕ್ಕಾಸ್ ವರ್ಗೀಸ್ ಅವರ ಶೇಕಡಾ 100 ಒಡೆತನದ ಕಂಪನಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read