ಈ ಬಾಳೆಹಣ್ಣು ಕಾಪಾಡುತ್ತೆ ನಿಮ್ಮ ಆರೋಗ್ಯ

ಹಿಂದೆಲ್ಲಾ ಮನೆಯಂಗಳದಲ್ಲೇ ಬೆಳೆಯುತ್ತಿದ್ದ ಚುಕ್ಕಿ ಬಾಳೆಹಣ್ಣು ಈಗ ಬಲು ಅಪರೂಪವಾಗಿದೆ. ಕೆಲವು ಸೀಸನ್ ಗಳಲ್ಲಿ ಕೆಲವೆಡೆ ಮಾತ್ರ ಲಭ್ಯವಾಗುವ ಈ ಬಾಳೆಹಣ್ಣು ದೇಹದ ಆರೋಗ್ಯ ಕಾಪಾಡಿ ನಿಮಗೆ ಎನರ್ಜಿ ತುಂಬುತ್ತದೆ.

ಈ ಬಾಳೆಹಣ್ಣು ತಿಂದು ಹೊತ್ತಿನ ಊಟವನ್ನೂ ಬಿಡಬಹುದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಬಾಳೆಹಣ್ಣು ಬೇಗ ಜೀರ್ಣವಾಗುವ ಕಾರಣ ಮಲಬದ್ಧತೆ ಸಮಸ್ಯೆ ಕಾಡದಂತೆ ನೋಡಿಕೊಳ್ಳುತ್ತದೆ. ಗ್ಯಾಸ್ಟಿಕ್ ಸಮಸ್ಯೆಯಿಂದ ಎದೆಯುರಿ ಕಾಡುತ್ತಿದ್ದರೆ ನಿತ್ಯ ಒಂದು ಬಾಳೆಹಣ್ಣು ಸೇವಿಸಿ ನೋಡಿ.

ಶೀತ ಸಮಸ್ಯೆ ಇರುವವರು ಮಧ್ಯಾಹ್ನ ಊಟದ ಬಳಿಕ ಬಾಳೆಹಣ್ಣು ತಿನ್ನಬಹುದು ಇದರಿಂದ ಕಫ ಕಟ್ಟುವ ಸಮಸ್ಯೆಯಿಂದ ದೂರವಿರಬಹುದು.

ಹೊಟ್ಟೆಯಲ್ಲಿ ಹುಣ್ಣಾಗಿದ್ದರೂ ಬಾಳೆಹಣ್ಣು ತಿನ್ನುವುದರಿಂದ ಈ ಸಮಸ್ಯೆ ಬಗೆಹರಿಯುತ್ತದೆ. ಇದು ಹಿಮೋಗ್ಲೋಬಿನ್ ಹೆಚ್ಚಿಸಿ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಮೂತ್ರ ವಿಸರ್ಜನೆ ವೇಳೆ ಉರಿ ಕಂಡು ಬರುವ ಸಮಸ್ಯೆಯನ್ನೂ ಇದು ಕಡಿಮೆ ಮಾಡುತ್ತದೆ.

ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ಈ ಚುಕ್ಕಿ ಬಾಳೆಹಣ್ಣಿನಲ್ಲಿ ಇರುವುದರಿಂದ ನಿತ್ಯ ಇದನ್ನು ಸೇವಿಸಿ. ಮಕ್ಕಳಿಗೂ ತಿನ್ನಲು ಕೊಡಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read