ಹೀಗೆ ಆಹಾರ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು

 

ಹಿಂದಿನ ಕಾಲದಲ್ಲಿ ಜನರು ಕೆಳಗೆ ಕುಳಿತು ಊಟ ಮಾಡುತ್ತಿದ್ದರು. ಇದರಿಂದ ಅವರು ಆರೋಗ್ಯವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡಲು ಇಷ್ಟಪಡುತ್ತಾರೆ. ಇದರಿಂದ ಅನಾರೋಗ್ಯಕ್ಕೀಡಾಗುತ್ತಾರೆ. ಹಾಗಾಗಿ ನೆಲದ ಮೇಲೆ ಕಾಲುಗಳನ್ನು ಮಡಚಿಕೊಂಡು ಕುಳಿತು ಊಟ ಮಾಡಿ. ಇದರಿಂದ ಹಲವು ಪ್ರಯೋಜನಗಳಿವೆ.

ನಾವು ನೆಲದ ಕುಳಿತುಕೊಳ್ಳುವಾಗ ಒಂದು ಕಾಲಿನ ಮೇಲೆ ಮತ್ತೊಂದು ಕಾಲನ್ನು ಇಡುವುದು. ಇದು ಒಂದು ಆಸನವಾಗಿದ್ದು ಇದನ್ನು ಪದ್ಮಾಸನ ಎಂದು ಕರೆಯುತ್ತಾರೆ. ಈ ಆಸನ ಏಕಾಗ್ರತೆಯನ್ನು ಹೆಚ್ಚಿಸಿ ಮಾನಸಿಕ ಒತ್ತಡವನ್ನು ಹೋಗಲಾಡಿಸುತ್ತದೆ. ಹೀಗೆ ಸೇವಿಸಿದರೆ ಆಹಾರದ ಸಂಪೂರ್ಣ ಲಾಭ ದೊರೆಯುತ್ತದೆ.

 ನೆಲದ ಮೇಲೆ ಕುಳಿತು ಊಟ ಮಾಡುವಾಗ ತಟ್ಟೆಯ ಕಡೆಗೆ ವಾಲುತ್ತೀರಿ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಇದರಿಂದ ಕಿಬ್ಬೊಟ್ಟೆಯ ಸ್ನಾಯುಗಳು ನಿರಂತರವಾಗಿ ಕೆಲಸ ಮಾಡುತ್ತವೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಈ ರೀತಿ ಊಟ ಮಾಡುವುದರಿಂದ ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ. ರಕ್ತನಾಳಗಳು ಹಿಗ್ಗುವಿಕೆ ದೂರವಾಗುತ್ತದೆ. ಇದು ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಹೃದಯವು ಆರೋಗ್ಯವಾಗಿರುತ್ತದೆ.

ಇದರಲ್ಲಿ ಮೊಣಕಾಲನ್ನು ಬಗ್ಗಿಸಿ ಕುಳಿತುಕೊಳ್ಳುವುದರಿಂದ ಮೊಣಕಾಲಿಗೆ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಇದರಿಂದ ಕೀಲುಗಳು ನಯಗೊಳ್ಳುತ್ತವೆ. ಇದರಿಂದ ಕೀಲುನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read