ನೆನಪಿನ ಶಕ್ತಿ ಹೆಚ್ಚಾಗಿ, ದಿನಪೂರ್ತಿ ಫ್ರೆಶ್ ಆಗಿರಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನ ತಿನ್ನಿ

ಆಯುರ್ವೇದದಲ್ಲಿ ಅನೇಕ ಔಷಧಿ ಸಸ್ಯಗಳನ್ನು ಶತಮಾನಗಳಿಂದಲೂ ಬಳಸಲಾಗ್ತಿದೆ. ಇದ್ರಲ್ಲಿ ಬ್ರಾಹ್ಮಿ ಕೂಡ ಒಂದು. ಅನೇಕ ಔಷಧಿ ಗುಣವನ್ನು ಹೊಂದಿರುವ ಬ್ರಾಹ್ಮಿ, ಮಿದುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅನೇಕ ರೋಗಗಳಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ. ಬ್ರಾಹ್ಮಿಯನ್ನು ಅನೇಕ ವಿಧದಲ್ಲಿ ಸೇವನೆ ಮಾಡಬಹುದು.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರಾಹ್ಮಿಯ ಎಲೆಗಳನ್ನು ತೊಳೆದು ಅಗೆದು ತಿನ್ನಬೇಕು. ಟೀ, ಕಷಾಯದ ರೂಪದಲ್ಲೂ ಅದನ್ನು ಸೇವನೆ ಮಾಡಬಹುದು. ಬ್ರಾಹ್ಮಿ ಎಲೆಗಳು ಲಭ್ಯವಿರದ ಸಂದರ್ಭದಲ್ಲಿ ಅದರ ಪುಡಿಯನ್ನು ಬಳಸಬಹುದು.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದರ ಎಲೆಗಳನ್ನು ಅಗಿಯುವುದರಿಂದ ಮೆದುಳಿನ ನರಗಳು ತೆರೆದುಕೊಳ್ಳುವ ಜೊತೆಗೆ ಬಲಗೊಳ್ಳುತ್ತವೆ. ದಿನವಿಡೀ ಅನುಭವಿಸುವ ಆಲಸ್ಯ ಮತ್ತು ಆಯಾಸ ಕಡಿಮೆಯಾಗುತ್ತದೆ.

ಒತ್ತಡ, ಖಿನ್ನತೆ, ಪದೇ ಪದೇ ಮರೆವು, ಮಾನಸಿಕ ಅಸ್ವಸ್ಥತೆಗಳು, ಮೂರ್ಛೆ ರೋಗವನ್ನು ಇದು ಕಡಿಮೆ ಮಾಡುತ್ತದೆ. ಸಂಶೋಧನೆಯ ಪ್ರಕಾರ, ಶೇಕಡಾ 97ರಷ್ಟು ಮೆದುಳಿಗೆ ಸಂಬಂಧಿಸಿದ ಅಸ್ವಸ್ಥತೆಗಳನ್ನು ತೆಗೆದು ಹಾಕುವ ಶಕ್ತಿ ಇದಕ್ಕಿದೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದರ ಎಲೆಗಳನ್ನು ಅಗಿಯುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಮೆದುಳಿಗೆ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಇದು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ.

1 ಗ್ಲಾಸ್ ಹಾಲಿನಲ್ಲಿ 2 ಚಮಚ ಬ್ರಾಹ್ಮಿ ಪುಡಿಯನ್ನು ಕುದಿಸಿ ಮತ್ತು ಮಲಗುವ ಮುನ್ನ ಕುಡಿಯಿರಿ. ಇದು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಸುಖ ನಿದ್ರೆಗೆ ಸಹಾಯಕಾರಿ.

ಬ್ರಾಹ್ಮಿ ಎಲೆಗಳನ್ನು ಅಗಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಶೀತದಂತ ಸಮಸ್ಯೆ ಕಡಿಮೆಯಾಗುತ್ತದೆ.

ಪ್ರತಿದಿನ ಬೆಳಿಗ್ಗೆ ಬ್ರಾಹ್ಮಿ ಎಲೆಗಳನ್ನು ಅಗಿಯುವುದರಿಂದ ಅಸ್ತಮಾ ಸಮಸ್ಯೆ ಕಡಿಮೆಯಾಗುತ್ತದೆ. ಗಂಟಲಿನಲ್ಲಿ ಕಫ ಮತ್ತು ಲೋಳೆಯ ಸಮಸ್ಯೆ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read