ಕೂದಲುದುರುವುದನ್ನು ತಡೆಯಲು ಪ್ರತಿದಿನ ಸೇವಿಸಿ ಈ ʼಆಹಾರʼ

ಯಾವುದೇ ಋತುಮಾನವಿರಲಿ ಕೂದಲನ್ನು ಸರಿಯಾಗಿ ಕಾಳಜಿ ವಹಿಸದಿದ್ದರೆ ಕೂದಲು ಒಣಗಿ ನಿರ್ಜೀವವಾಗುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತದೆ. ಈ ಸಮಸ್ಯೆ ಯಾವುದೇ ಮನೆಮದ್ದಿನಿಂದ ನಿವಾರಣೆಯಾಗದಿದ್ದರೆ ಪ್ರತಿದಿನ ಈ ಆಹಾರವನ್ನು ಸೇವಿಸಿ ಕೂದಲಿನ ಸಮಸ್ಯೆ ನಿವಾರಿಸಿಕೊಳ್ಳಿ.

*ಮೊಟ್ಟೆ : ಮೊಟ್ಟೆಗಳಲ್ಲಿ ಸಾಕಷ್ಟು ಪ್ರೋಟೀನ್ ಇದೆ. ಇದು ಕೂದಲ ಬೆಳವಣಿಗೆಗೆ ಸಹಕಾರಿ. ಹಾಗಾಗಿ ಪ್ರತಿದಿನ ಮೊಟ್ಟೆಯನ್ನು ಸೇವಿಸಿ.

*ಬಾದಾಮಿ : ಬಾದಾಮಿಯಲ್ಲಿ ಪ್ರೋಟೀನ್, ಜೀವಸತ್ವಗಳು ಉತ್ತಮವಾಗಿದೆ. ಇದು ಕೂದಲಿನ ಬುಡವನ್ನು ಬಲಪಡಿಸುತ್ತದೆ. ಹಾಗಾಗಿ ಪ್ರತಿದಿನ ಬಾದಾಮಿ ನೆನೆಸಿ ತಿನ್ನಿ.

*ತೆಂಗಿನೆಣ್ಣೆ: ಇದು ಕೂದಲಿನ ಶುಷ್ಕತೆ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ತೆಂಗಿನೆಣ್ಣೆ ಸೇವಿಸಿ.

*ಬೀಜಗಳು : ಕೂದಲು ಆರೋಗ್ಯವಾಗಿರಲು ಅಗಸೆ ಬೀಜ, ಸಾಸಿವೆ, ಚಿಯಾ ಬೀಜಗಳನ್ನು ಸೇವಿಸಿ. ಇದು ಕೂದಲಿನ ಬೆಳವಣಿಗೆಗೆ ಬೇಕಾದ ಪೋಷಕಾಂಶವನ್ನು ಒದಗಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read