ಈ 5 ತರಕಾರಿಗಳನ್ನು ಬೇಯಿಸಿಯೇ ತಿನ್ನಿ, ಹಸಿಯಾಗಿ ತಿಂದರೆ ದೇಹಕ್ಕೆ ಸಿಗುವುದಿಲ್ಲ ಪೋಷಕಾಂಶ….!

ಹಸಿ ತರಕಾರಿಗಳ ಸೇವನೆ ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವೊಂದು ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು. ಅವುಗಳನ್ನು ಬೇಯಿಸಿಯೇ ತಿನ್ನಬೇಕು. ಸ್ವಚ್ಛತೆ ಮತ್ತು ಜೀರ್ಣಕ್ರಿಯೆಯ ದೃಷ್ಟಿಯಿಂದ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು.

ಪಾಲಕ್‌ ಸೊಪ್ಪು : ಪಾಲಕ್ ಸೊಪ್ಪನ್ನು ಬೇಯಿಸಿಯೇ ತಿನ್ನುವುದು ಉತ್ತಮ. ಏಕೆಂದರೆ ಪಾಲಕ್‌ ಎಲೆಗಳಲ್ಲಿರುವ ಕೊಳೆ ಮತ್ತು ಬ್ಯಾಕ್ಟೀರಿಯಾವನ್ನು ಇದು ನಿವಾರಿಸುತ್ತದೆ. ಬಿಸಿ ನೀರಲ್ಲಿ ಕುದಿಸುವುದರಿಂದ ಪಾಲಕ್‌ ಸೊಪ್ಪಿನಲ್ಲಿರುವ ಆಕ್ಸಾಲಿಕ್ ಆಮ್ಲ ಕೂಡ  ಕಡಿಮೆಯಾಗುತ್ತದೆ. ಇದು ಕ್ಯಾಲ್ಸಿಯಂ ಮತ್ತು ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ರಕ್ತಹೀನತೆಯ ಅಪಾಯ ಕಡಿಮೆಯಾಗುತ್ತದೆ.

ಬ್ರೊಕೊಲಿ : ಬ್ರೊಕೊಲಿಯನ್ನು ಕೂಡ ಹಸಿಯಾಗಿ ತಿನ್ನಬೇಡಿ, ಇದನ್ನು ಬೇಯಿಸಿ ತಿನ್ನುವುದರಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆ ಸುಧಾರಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಸಮೃದ್ಧವಾಗಿದೆ. ಹಾಗಾಗಿ ಬ್ರೊಕೊಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಚರ್ಮದ ಆರೋಗ್ಯವನ್ನು ಸುಧಾರಿಸಲು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಗೆಣಸು: ಸಿಹಿ ಗೆಣಸುಗಳನ್ನು ಬೇಯಿಸುವುದರಿಂದ ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಬೀಟಾ-ಕ್ಯಾರೋಟಿನ್ ಅನ್ನು ಉಳಿಸಿಕೊಳ್ಳಬಹುದು. ಬೇಯಿಸಿದ ಸಿಹಿ ಗೆಣಸು ತಿನ್ನುವುದರಿಂದ ದೃಷ್ಟಿ ಸುಧಾರಿಸುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಚರ್ಮದ ಆರೋಗ್ಯವೂ ಸುಧಾರಿಸುತ್ತದೆ.

ಹಸಿರು ಬೀನ್ಸ್: ಬೀನ್ಸ್‌ ಅನ್ನು ಬೇಯಿಸಿ ತಿಂದರೆ ಜೀರ್ಣಿಸಿಕೊಳ್ಳುವುದು ಸುಲಭ. ಹೀಗೆ ಮಾಡುವುದರಿಂದ ವಿಟಮಿನ್ ಎ, ವಿಟಮಿನ್ ಸಿ ನಮ್ಮ ದೇಹಕ್ಕೆ ಸಿಗುತ್ತದೆ. ಹಸಿರು ಬೀನ್ಸ್ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಅಷ್ಟೇ ಅಲ್ಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲದು.

ಶತಾವರಿ : ಬೇಯಿಸಿದ ಶತಾವರಿಯನ್ನು ಸೇವಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳು ಹೆಚ್ಚು ಜೈವಿಕ ಲಭ್ಯವಾಗುವಂತೆ ಮಾಡುತ್ತದೆ ಮತ್ತು ಆಕ್ಸಾಲಿಕ್ ಆಮ್ಲದಂತಹ ಪೋಷಕಾಂಶಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಬೇಯಿಸಿದ ಶತಾವರಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಸಮೃದ್ಧವಾಗಿರುತ್ತದೆ. ಇವು ಚರ್ಮದ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ಮೂಳೆಗಳ ಆರೋಗ್ಯಕ್ಕೆ ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read