ಸುಲಭವಾಗಿ ಮಾಡಬಹುದು ‘ವೆಜಿಟೆಬಲ್’ ಕಬಾಬ್

ಕಬಾಬ್ ಎಂದ ಕೂಡಲೇ ಹೆಚ್ಚಿನವರಿಗೆ ನಾನ್ ವೆಜ್ ನೆನಪಿಗೆ ಬರುತ್ತದೆ. ಆದರೆ, ವೆಜಿಟೆಬಲ್ ನಲ್ಲೂ ಕಬಾಬ್ ಮಾಡಬಹುದು. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ವೆಜಿಟೆಬಲ್ ಕುರಿತ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

ಕ್ಯಾರೆಟ್ -6, ಫ್ರೆಂಚ್ ಬೀನ್ಸ್ -200 ಗ್ರಾಂ, ಆಲೂಗಡ್ಡೆ -500 ಗ್ರಾಂ, ಬಾಳೆಕಾಯಿ -2, ಬೀಟ್ ರೂಟ್ -2, ಈರುಳ್ಳಿ -6 ಕೊತ್ತಂಬರಿ ಸೊಪ್ಪು -1/2 ಕಂತೆ, ಕಡಲೆ ಹಿಟ್ಟು -6 ಚಮಚ, ಒಣ ಬ್ರೆಡ್ ಚೂರು -6 ಚಮಚ, ಬ್ರೆಡ್ ಸ್ಲೈಸ್ -12, ಕ್ರೀಮ್ -2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ –ಕರಿಯಲು ತಕ್ಕಷ್ಟು,

ಪೇಸ್ಟ್ ತಯಾರಿಕೆಗೆ ಬೇಕಾದ ಪದಾರ್ಥಗಳು:

ಹಸಿ ಶುಂಠಿ -1 ಇಂಚಿನಷ್ಟು ಚೂರು, ಹಸಿ ಮೆಣಸಿನ ಕಾಯಿ -8, ಬೆಳ್ಳುಳ್ಳಿ -8 ಎಸಳು, ಗಸಗಸೆ -2 ಚಮಚ, ಮೆಣಸಿನಪುಡಿ -2 ಚಮಚ, ಜೀರಿಗೆ ½ ಚಮಚ, ಸೋಂಪು – 1/2 ಚಮಚ, ಏಲಕ್ಕಿ -4, ಕಾಳು ಮೆಣಸು -1 ಚಮಚ, ವಿನಿಗರ್ -4 ಚಮಚ, ದಾಲ್ಚಿನ್ನಿ – 1 ತುಂಡು, ಲವಂಗ -4,

ತಯಾರಿಸುವ ವಿಧಾನ:

ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಆಲೂಗಡ್ಡೆಯನ್ನು ನೀರಿನಲ್ಲಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿರಿ. ನೀರು ಸುರಿದು ಬೇಯಿಸಲು ಒಲೆಯ ಮೇಲೆ ಇಡಿ.

ಬೆಂದ ಬಳಿಕ ಸಿಪ್ಪೆ ಬಿಡಿಸಿ ಕೈಯಿಂದ ಪುಡಿ ಮಾಡಿಕೊಳ್ಳಿ. ಕ್ಯಾರೆಟ್, ಬೀಟ್ ರೂಟ್ ಗಳ ಸಿಪ್ಪೆ ತೆಗೆದುಕೊಳ್ಳಿ. ಬೀನ್ಸ್, ನಾರು ಬಿಡಿಸಿ ಹೆಚ್ಚಿಕೊಳ್ಳಿ.

ಅವುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಬೇಯಿಸಿಕೊಳ್ಳಿ. ನಂತರ ಬಾಳೇಕಾಯಿಯನ್ನು ಸಿಪ್ಪೆ ಸಮೇತ(ಆಲೂಗಡ್ಡೆಯಂತೆ) ಬೇಯಿಸಿಕೊಳ್ಳಿ. ಬೆಂದ ಮೇಲೆ ಸಿಪ್ಪೆ ಬಿಡಿಸಿ ಕೈಯಿಂದ ಹಿಚುಕಿ ಪುಡಿ ಮಾಡಿಕೊಳ್ಳಿ.

ಬೇಯಿಸಿದ ಬೀಟ್ ರೂಟ್ ಮತ್ತು ಕ್ಯಾರೆಟ್ ಗಳನ್ನು ತುರಿಯುವ ಮಣೆಯಿಂದ ತುರಿದುಕೊಳ್ಳಿ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಒಲೆಯ ಮೇಲಿಡಿ, ಕಾದ ಮೇಲೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.

ಅದಕ್ಕೆ ಅರೆದುಕೊಂಡ ಪೇಸ್ಟ್, ಉಪ್ಪಿನ ಪುಡಿ, ಸ್ವಲ್ಪ ಸಕ್ಕರೆ, ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು ಹಾಕಿ ಮೊಗಚು ಕೈಯಿಂದ ಕಲೆಸಿರಿ.

ನಂತರ ಬೇಯಿಸಿಕೊಂಡ ತರಕಾರಿಗಳು ಮತ್ತು ಪುಡಿ ಮಾಡಿದ ಆಲೂಗಡ್ಡೆ, ಬಾಳೆಕಾಯಿ ಹಾಕಿ ಮಿಶ್ರಣ ಮಾಡಿ. ನೀರಿನಂಶ ಆರಿದ ಮೇಲೆ ಬಾಣಲಿಯನ್ನು ಕೆಳಗಿಳಿಸಿರಿ.

ಬಳಿಕ ನೀರಿನಲ್ಲಿ ನೆನೆಸಿ ಹಿಂಡಿದ ಬ್ರೆಡ್ ಸ್ಲೈಸ್, ಕಡಲೆ ಹಿಟ್ಟು ಮತ್ತು ಒಣಗಿದ ಬ್ರೆಡ್ ಚೂರುಗಳನ್ನು ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ. ಆಮೇಲೆ ಅದನ್ನು ನಾದಿ ಉಂಡೆಗಳನ್ನು ಮಾಡಿ.

ಒಂದು ಬಾಣಲಿಯಲ್ಲಿ ಎಣ್ಣೆಯನ್ನು ಹಾಕಿ ಒಲೆಯ ಮೇಲಿಡಿ. ಕಾದ ಮೇಲೆ ಉಂಡೆಗಳನ್ನು ಮಾಡಿ ಎಣ್ಣೆಯಲ್ಲಿ ಹಾಕಿ ಕರಿಯಿರಿ.

ಕೆಂಪಗೆ ಬೆಂದಮೇಲೆ ಜಾಲರಿಯಿಂದ ತೆಗೆಯಿರಿ. ಅದರ ಮೇಲೆ ಸ್ವಲ್ಪ ಉಪ್ಪಿನ ಪುಡಿ, ಕಾಳು ಮೆಣಸು ಪುಡಿ, ಲಿಂಬೆರಸ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಸಿಹಿ ಚಟ್ನಿಯೊಂದಿಗೆ ಬಡಿಸಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read