ಸುಲಭವಾಗಿ ಮಾಡಿ ಗೋಧಿ ಕಡಿ ಪಾಯಸ

ಪಾಯಸ ಹೆಸರು ಕೇಳುತ್ತಲೇ ಸಿಹಿ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಸುಲಭವಾಗಿ ಗೋಧಿ ಕಡಿ ಪಾಯಸ ಮಾಡುವ ವಿಧಾನ ಇದೆ. ಮನೆಯಲ್ಲಿ ಒಮ್ಮೆ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು:

ತುಪ್ಪ – 1 ಟೇಬಲ್ ಸ್ಪೂನ್, ಗೋಧಿ ಕಡಿ – 1/2 ಕಪ್, ಸಬ್ಬಕ್ಕಿ – 1/4 ಕಪ್, ನೀರು – 1.5 ಕಪ್, ಬೆಲ್ಲ – 1 ಕಪ್ ಪುಡಿ ಮಾಡಿಕೊಂಡಿದ್ದು, ತೆಂಗಿನಕಾಯಿ ಹಾಲು – 2 ಕಪ್, ಏಲಕ್ಕಿ ಪುಡಿ – 1 ಟೀ ಸ್ಪೂನ್, ಗೋಡಂಬಿ – 10.

ಮಾಡುವ ವಿಧಾನ:

ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಗೋಧಿ ಕಡಿಯನ್ನು 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದನ್ನು ಒಂದು ಕುಕ್ಕರ್ ಗೆ ಹಾಕಿಕೊಂಡು ಅದಕ್ಕೆ ತೊಳೆದುಕೊಂಡ ಸಬ್ಬಕ್ಕಿ ಸೇರಿಸಿ ನೀರು ಹಾಕಿ 2 ವಿಷಲ್ ಕೂಗಿಸಿಕೊಳ್ಳಿ. ಇದು ತಣ್ಣಗಾದ ಮೇಲೆ ಒಂದು ಬಾಣಲೆಗೆ ತೆಗೆದುಕೊಳ್ಳಿ ನಂತರ ಇದಕ್ಕೆ ಬೆಲ್ಲದ ಪುಡಿ ಸೇರಿಸಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

ಈ ಮಿಶ್ರಣ ತುಸು ದಪ್ಪಗಾಗುತ್ತಿದ್ದಂತೆ ತೆಂಗಿನಕಾಯಿ ಹಾಲು ಸೇರಿಸಿ ಮಿಕ್ಸ್ ಮಾಡಿಕೊಂಡು ಸಣ್ಣ ಉರಿಯಲ್ಲಿ 2 ನಿಮಿಷಗಳ ಕಾಲ ಬೇಯಿಸಿಕೊಂಡು ಏಲಕ್ಕಿ ಪುಡಿ ಸೇರಿಸಿ ಗ್ಯಾಸ್ ಆಫ್ ಮಾಡಿ. ನಂತರ ತುಪ್ಪದಲ್ಲಿ ಗೋಡಂಬಿ ಹುರಿದುಕೊಂಡು ಅದನ್ನು ಈ ಪಾಯಸಕ್ಕೆ ಹಾಕಿ ಮಿಕ್ಸ್ ಮಾಡಿ ಸರ್ವ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read