ಎಸ್‌.ಆರ್‌.ಕೆ. ಅಭಿನಯದ ’ಡಿಯರ್‌ ಜ಼ಿಂದಗಿ’ ಚಿತ್ರದ ದೃಶ್ಯ ವೈರಲ್

’ಡಿಯರ್‌ ಜ಼ಿಂದಗಿ’ ಶಾರುಖ್‌ ಖಾನ್‌ರ ಮುಂಬರುವ ಚಿತ್ರವಾಗಿದ್ದು, ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ಆಲಿಯಾ ಭಟ್ ಸಹ ಇದ್ದಾರೆ.

ತಾನು ಬಯಸುವ ವೃತ್ತಿಗೂ ತನ್ನ ವ್ಯಕ್ತಿತ್ವಕ್ಕೂ ಅಜಗಜಾಂತರ ವ್ಯತ್ಯಾಸ ಇರುವ ವ್ಯಕ್ತಿಯ ಕುರಿತಾದ ಕಥೆ ಇದಾಗಿದೆ. ಜೀವನದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವ ಕ್ಷಮತೆ ಇಲ್ಲದ ಕಾರಣ ಶಾರುಖ್ ಖಾನ್‌ ಬಳಿ ತೆರಳುತ್ತಾಳೆ ಈಕೆ. ಚಿತ್ರದಲ್ಲಿ ಕೂಲ್ ಮನಸ್ಥಿತಿಯ ಥೆರಪಿಸ್ಟ್ ಆಗಿರುವ ಶಾರುಖ್ ಖಾನ್ ಹಳೆಯ ಬೈಸಿಕಲ್‌ಗಳನ್ನು ಬಳಸಿ ಸುಂದರವಾದ ಕಲಾಕೃತಿಗಳನ್ನು ರಚಿಸುತ್ತಾರೆ.

ಚಿತ್ರದಲ್ಲಿ ನಮ್ಮ ದೈನಂದಿನ ಜೀವನದ ಮೇಲೂ ಸಂದೇಶ ಬೀರಬಲ್ಲ ಅನೇಕ ವಿಚಾರಗಳಿವೆ. “ಸುಲಭವಾದದ್ದು ಯಾವಾಗಲೂ ಸರಿಯಾಗಿರುವುದಿಲ್ಲ,” ಎನ್ನುವ ಮಾತಿಗೆ ಅಪ್ಯಾಯಮಾನವಾದ ತರ್ಕವೊಂದನ್ನು ಚಿತ್ರದ ದೃಶ್ಯವೊಂದರಲ್ಲಿ ತೋರಿದ್ದು, ಅದೀಗ ನೆಟ್ಟಿಗರಲ್ಲಿ ಭಾರೀ ವೈರಲ್ ಆಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read