ಸುಲಭವಾಗಿ ಕರಗಿಸಿ ತೋಳುಗಳ ಕೊಬ್ಬು

ಕೈಯ ತೋಳುಗಳಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗಿದೆ ಎಂದು ನಿಮಗನಿಸಿದೆಯೇ. ಅವುಗಳನ್ನು ಕಡಿಮೆ ಮಾಡುವ ಬಗೆ ಯಾವುದು ಎಂದು ಆಲೋಚಿಸುತ್ತಿದ್ದೀರೇ? ಹಾಗಿದ್ದರೆ ಇಲ್ಲಿ ಕೇಳಿ.

ಡಯಟ್ ಮಾಡುವುದು ಎಂದರೆ ಕಡಿಮೆ ಕ್ಯಾಲೊರಿಯ ಆಹಾರಗಳನ್ನು ಸೇವಿಸುವುದು. ಇದರೊಂದಿಗೆ ಸಾಕಷ್ಟು ಪ್ರಮಾಣದ ನೀರು ಕುಡಿಯುವುದು ಬಹಳ ಮುಖ್ಯ.

ಕೊಬ್ಬಿನ ಅಂಶವನ್ನು ಕರಗಿಸಲು ನೀವು ಭಾರ ಎತ್ತುವ ವ್ಯಾಯಾಮಗಳನ್ನು ಕಡ್ಡಾಯವಾಗಿ ಮಾಡಲೇ ಬೇಕು. ನಿಮ್ಮ ಜಿಮ್ ಟ್ರೈನರ್ ಬಳಿ ಬೈಸೆಪ್ಸ್ ವ್ಯಾಯಾಮ ಮಾಡುವುದನ್ನು ಕಲಿತುಕೊಳ್ಳಿ. ಮನೆಯಲ್ಲೂ ಇದನ್ನು ಅಭ್ಯಾಸ ಮಾಡಬಹುದು.

ಮಾಂಸಖಂಡಗಳ ಕುರಿತು ಹೆಚ್ಚಿನ ಗಮನ ಹರಿಸಿ. ಭುಜದ ಭಾಗಕ್ಕೆ ವ್ಯಾಯಾಮ ಸಿಗುವಂತ ವರ್ಕೌಟ್ ಗಳನ್ನು ಹೆಚ್ಚಾಗಿ ಮಾಡಿ. ಇದರಿಂದ ನಿಮ್ಮ ದೈಹಿಕ ಸದೃಢತೆಯೂ ಹೆಚ್ಚುತ್ತದೆ. ನಾರಿನಂಶ ಮತ್ತು ಪ್ರೊಟೀನ್ ಯುಕ್ತ ಆಹಾರಗಳನ್ನು ಹೆಚ್ಚು ಸೇವಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read