ಮನಸ್ಸಿನಲ್ಲಿ ಯಾವುದೂ ಇಟ್ಟುಕೊಳ್ಳಬಾರದು; ಬಿ.ಆರ್.ಪಾಟೀಲ್ ಅಸಮಾಧಾನಕ್ಕೆ ವಿಷಾದ ವ್ಯಕ್ತಪಡಿಸಿದ ಸಚಿವ ಈಶ್ವರ ಖಂಡ್ರೆ

ಬೀದರ್: ಅರಣ್ಯ ಸಚಿವ ಈಶ್ವರ ಖಂಡ್ರೆ ನನಗೆ ಎರಡು ಬಾರಿ ಅಪಮಾನ ಮಾಡಿದ್ದಾರೆ ಎಂದು ಸ್ವಪಕ್ಷದ ಸಚಿವರ ವಿರುದ್ಧವೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದ ಸಿಎಂ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ್ ಹೇಳಿಕೆಗೆ ಸಚಿವ ಈಶ್ವರ ಖಂಡ್ರೆ ಕ್ಷಮೆ ಕೋರಿದ್ದಾರೆ.

ಬೀದರ್ ನಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಸಿಎಂ ಅಭಿನಂದನಾ ಕಾರ್ಯಕ್ರಮದಲ್ಲಿ ಬಿ.ಆರ್.ಪಾಟೀಲ್ ಅವರಿಗೆ ನೋವಾಗಿದ್ದಕ್ಕೆ ವಿಷಾದವಿರಲಿ ಎಂದಿದ್ದಾರೆ. ಬಿ.ಆರ್.ಪಾಟೀಲ್ ಹಿರಿಯರಿದ್ದಾರೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಒಂದು ದಿನ ಮುಂಚಿತವಾಗಿಯೇ ಹೋಗಿ ಶಿಷ್ಟಾಚಾರದ ಪ್ರಕಾರ ಮೊದಲ ಸಾಲಿನಲ್ಲಿ ಅವರಿಗೆ ಖುರ್ಚಿ ಹಾಕಿಸಿ, ಅದಕ್ಕೆ ಅವರ ಹೆಸರನ್ನು ಅಂಟಿಸಿಸಿದ್ದನ್ನು ನೋಡಿಕೊಂಡೇ ಬಂದಿದ್ದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳನ್ನು ಸ್ವಾಗತ ಮಾಡಿ ಬರುವಾಗ ಸ್ವಲ್ಪ ವಿಳಂಬವಾಗಿದೆ. ಆಗ ಬಿ.ಆರ್.ಪಾಟೀಲ್ ಬಂದಿದ್ದು ನನ್ನ ಗಮನಕ್ಕೆ ಬರಲಿಲ್ಲ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮ ಆಯೋಜನೆ ಮಾಡಿದವರಿಂದ ಅಚಾತುರ್ಯ ಆಗಿದೆ. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ.ಬಿ.ಆರ್.ಪಾಟೀಲ್ ಅವರು ಮನಸ್ಸಿನಲ್ಲಿ ಯಾವುದನ್ನು ಇಟ್ಟುಕೊಳ್ಳಬಾರದು ಎಂದು ಮನವಿ ಮಾಡುತ್ತೇನೆ. ಅವರೊಂದಿಗೆ ನಾನೇ ನೇರವಾಗಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read