Manipura Violence : ಮಣಿಪುರದಲ್ಲಿ ಪೊಲೀಸರ ಹದ್ದಿನ ಕಣ್ಣು : 6 ಸಾವಿರ ಪ್ರಕರಣ ದಾಖಲು

ನವದೆಹಲಿ: ಜನಾಂಗೀಯ ಘರ್ಷಣೆಗಳ ನಡುವೆ ಮಣಿಪುರದಲ್ಲಿ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಬೆತ್ತಲೆ ಮೆರವಣಿಗೆ ನಡೆಸಿದ ವೀಡಿಯೊ ವೈರಲ್ ಆದ ಬೆನ್ನಲ್ಲೇ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. ಇದರ ನಡುವೆ ಸರ್ಕಾರಿ ಸಂಸ್ಥೆಗಳು ಮತ್ತು ಭದ್ರತಾ ಪಡೆಗಳು ರಾಜ್ಯದಲ್ಲಿ ನಡೆದ ಎಲ್ಲಾ ಘಟನೆಗಳ ಪರಿಶೀಲನೆಯನ್ನು ಹೆಚ್ಚಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.

ಮಣಿಪುರ ಹಿಂಸಾಚಾರದಿಂದ ಘಟನೆಯಿಂದಲೇ ಭಾರಿ ಸುದ್ದಿಯಾಗುತ್ತಿದ್ದು, ಅದರಲ್ಲೂ ಈಶಾನ್ಯ ರಾಜ್ಯದ ಗ್ರಾಮವೊಂದರಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ವಿಪಕ್ಷಗಳ ಆಕ್ರೋಶ ಮತ್ತಷ್ಟು ಹೆಚ್ಚಿದೆ.
ಮೇ 3 ರಿಂದ ಪ್ರಾರಂಭವಾದ ಹಿಂಸಾತ್ಮಕ ಘರ್ಷಣೆಗಳ ಸ್ಫೋಟದ ನಂತರ, ಏಜೆನ್ಸಿಗಳು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೇಲೆ ತಮ್ಮ ಜಾಗರೂಕತೆಯನ್ನು ಬಿಗಿಗೊಳಿಸಿವೆ. ಈವರೆಗೆ 6,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೆಚ್ಚಿನವು ಬೆಂಕಿ ಮತ್ತು ಸರ್ಕಾರಿ ಆಸ್ತಿಪಾಸ್ತಿಗೆ ಹಾನಿಗೆ ಸಂಬಂಧಿಸಿದ ಪ್ರಕರಣಗಳಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

“ನಾವು ನಮ್ಮ ಮೇಲ್ವಿಚಾರಣಾ ಪ್ರಯತ್ನಗಳನ್ನು ಹೆಚ್ಚಿಸಿರುವುದರಿಂದ, ಹಲವಾರು ಸಂಭಾವ್ಯ ಪ್ರಚೋದನಕಾರಿ ಹೇಳಿಕೆಗಳನ್ನು ಅವು ಉಲ್ಬಣಗೊಳ್ಳುವ ಮೊದಲು ಅವುಗಳನ್ನು ತಳ್ಳಿಹಾಕುವಲ್ಲಿ ನಾವು ಯಶಸ್ವಿಯಾಗಿದ್ದೇವೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮಣಿಪುರದಲ್ಲಿ ಅಶಾಂತಿಯು ಕುಕಿ ಬುಡಕಟ್ಟು ಗುಂಪು ಮತ್ತು ಜನಾಂಗೀಯ ಬಹುಸಂಖ್ಯಾತ ಮೈಟಿ ನಡುವಿನ ಹಿಂಸಾತ್ಮಕ ಜನಾಂಗೀಯ ಘರ್ಷಣೆಗಳೊಂದಿಗೆ ಪ್ರಾರಂಭವಾಯಿತು, ಇದು ಕನಿಷ್ಠ 125 ಮಂದಿ ಮೃತಪಟ್ಟಿದ್ದಾರೆ. 40,000 ಕ್ಕೂ ಹೆಚ್ಚು ಜನರು ಈಗಾಗಲೇ ಊರು ಬಿಟ್ಟು ಬೇರೆಕಡೆ ಸ್ಥಳಾಂತರಗೊಂಡಿದ್ದಾರೆ.

ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಯು 140 ಕೋಟಿ ಭಾರತೀಯರಿಗೆ ನಾಚಿಕೆಯನ್ನುಂಟು ಮಾಡಿದೆ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ಗುಡುಗಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read