ಇದ್ದಕ್ಕಿದ್ದಂತೆ ಹೊತ್ತಿ ಉರಿದ ರಿಕ್ಷಾ….! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ರಸ್ತೆಯಲ್ಲಿ ಪಟಾಕಿ ಹಚ್ಚಿದ್ದರ ಪರಿಣಾಮ ಇ- ರಿಕ್ಷಾಗೆ ಬೆಂಕಿ ಹೊತ್ತುಕೊಂಡು ಕನಿಷ್ಠ ಒಬ್ಬರು ಸಾವನ್ನಪ್ಪಿರೋ ಘಟನೆ ಗ್ರೇಟರ್ ನೋಯಿಡಾದಲ್ಲಿ ನಡೆದಿದೆ. ಈ ಘಟನೆ ನೆರೆಹೊರೆಯವರು ಮತ್ತು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ.‌

ಈ ಪ್ರದೇಶದಲ್ಲಿ ಜಗನ್ನಾಥ ಯಾತ್ರೆ ವೇಳೆ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ, ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ.

ರಸ್ತೆಯಲ್ಲಿರುವ ಅಂಗಡಿಯೊಂದರ ಸಿಸಿ ಕ್ಯಾಮೆರಾದಲ್ಲಿ ಭಯಾನಕ ಘಟನೆ ಸೆರೆಯಾಗಿದ್ದು ದುರಂತಕ್ಕೆ ಪಟಾಕಿಯೇ ಕಾರಣ ಎನ್ನಲಾಗಿದೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವೀಡಿಯೊದಲ್ಲಿ ದಾದ್ರಿ ಪ್ರದೇಶದ ಸಣ್ಣ ಅಂಗಡಿಯೊಂದರ ಮುಂದೆ ಜನರು ಹಾದು ಹೋಗುತ್ತಿರುವಾಗ ಇ-ರಿಕ್ಷಾ ನಿಂತಿದೆ. ಈ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಭಾರೀ ಸ್ಫೋಟ ಸಂಭವಿಸಿದೆ.

ತಕ್ಷಣ ಜನರು ಓಡಲಾರಂಭಿಸುತ್ತಾರೆ. ಇದೇ ವೇಳೆ ಸೈಕಲ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ಕೆಳಗೆ ಬೀಳುತ್ತಾರೆ. ಬೆಚ್ಚಿಬೀಳಿಸುವ ಈ ವಿಡಿಯೋ ರಸ್ತೆಯಲ್ಲಿ ಪಟಾಕಿ ಸಿಡಿಸುವುದು ಸುರಕ್ಷಿತವಲ್ಲ ಎಂಬುದನ್ನ ಸೂಚಿಸುತ್ತದೆ.

https://twitter.com/noidapolice/status/1630215649934086151?ref_src=twsrc%5Etfw%7Ctwcamp%5Etweetembed%7Ctwterm%5E1630215649934086151%7Ctwgr%5E2ca2a3e3511e89a36a5ce156fca2bc580033d10d%7Ctwcon%5Es1_&ref_url=https%3A%2F%2Fwww.news18.com%2Fnews%2Findia%2Fe-rickshaw-loaded-with-firecrackers-blows-up-in-middle-of-greater-noida-road-caught-on-cam-7183387.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read