ಬೆಂಗಳೂರು: ಗ್ರಾಪಂನಲ್ಲಿ ಕಾರ್ಯನಿರ್ವಹಿಸುವ ನೀರು ಗಂಟಿ, ಕರ ವಸೂಲಿ ಮಾಡುವವರಿಗೆ ಇನ್ನು ಇ- ಹಾಜರಾತಿಗೆ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕರ ವಸೂಲಿಗಾರರು, ನೀರುಗಂಟಿ, ಸ್ವಚ್ಛತಾಗಾರರಿಗೆ ಕಚೇರಿಗೆ ತೆರಳಿ ಬಯೋಮೆಟ್ರಿಕ್ ಹಾಜರಾತಿ ದಾಖಲಿಸಲು ವಿನಾಯಿತಿ ನೀಡಿ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ನೀರುಗಂಟಿ, ಕರ ವಸೂಲಿಗಾರರು, ಸ್ವಚ್ಛತಾಗಾರರಿಗೆ ಪಂಚತಂತ್ರ 2.0 ತಂತ್ರಾಂಶದಲ್ಲಿ ಬಯೋಮೆಟ್ರಿಕ್ ಹಾಜರಾತಿ ದಾಖಲಿಸುವುದಕ್ಕೆ ವಿನಾಯಿತಿ ನೀಡಿದ್ದು, ಪಂಚತಂತ್ರ 2.0 ಮೊಬೈಲ್ ಆ್ಯಪ್ ಮೂಲಕ ಹಾಜರಾತಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.