ಕಹಾನಿ ಸುನೋ 2.0ಗೆ ದನಿಗೂಡಿದ ಡಚ್‌ ಹಾಡುಗಾರ್ತಿಗೆ ಭೇಷ್ ಎಂದ ಪಾಕ್ ಗಾಯಕ

ಪಾಕಿಸ್ತಾನದ ಖ್ಯಾತ ಗಾಯಕ ಹಾಗೂ ಬರಹಗಾರ ಕೈಫಿ ಖಲೀಲ್ ತಮ್ಮದೇ ಕಂಠಸಿರಿಯಲ್ಲಿ ಕಹಾನಿ ಸುನಿ 2.0 ಹಾಡನ್ನು ಯೂಟ್ಯೂಬ್‌ನಲ್ಲಿ ಕಳೆದ ವರ್ಷ ಬಿಡುಗಡೆ ಮಾಡಿದ್ದರು. ಅವರ ಈ ಹಾಡು ಅಂತರ್ಜಾಲದಲ್ಲಿ ಭಾರೀ ಜನಪ್ರಿಯವಾಗಿದೆ. ಇದೀಗ ಈ ಹಾಡಿನ ನಕಲು ಅವತರಣಿಕೆಯೊಂದು ಇಷ್ಟೇ ಖ್ಯಾತಿ ಪಡೆಯುತ್ತಿದೆ.

ಡಚ್‌ ಗಾಯಕಿ, ಹಾಡು ಬರಹಗಾರ್ತಿ ಹಾಗೂ ಯೂಟ್ಯೂಬರ್‌ ಎಮ್ಮಾ ಹೀಸ್ಟರ್ಸ್ ತಮ್ಮದೇ ಮಧುರ ಕಂಠದಲ್ಲಿ ಈ ಹಾಡನ್ನು ಹಾಡಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದರು. ಈ ಹಾಡಿಗೆ ಎಮ್ಮಾರ ಅಕ್ಸೆಂಟ್‌ ಜಾದೂ ಮಾಡಿದೆ. ಉರ್ದು ಅಥವಾ ಹಿಂದಿ ಮಾತನಾಡಲು ಬಾರದ ಎಮ್ಮಾ ಈ ಹಾಡನ್ನು ಹಾಡಿರುವುದು ಇನ್ನಷ್ಟು ಸ್ಪೆಶಲ್ ಸಂಗತಿಯಾಗಿದೆ.

“ಕಹಾನಿ ಸುನೋ 2.0. ನನ್ನ ರೀಲ್ಸ್‌ಗೆ 250 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಸಿಕ್ಕಿವೆ! ವವ್‌, ಹೀಗಾಗಿ ನಾನು ಮತ್ತೊಂದು ಸುಂದರ ಭಾಷೆಯಲ್ಲಿ ಹಾಡುವ ಸಮಯ ಬಂದಿದೆ ಎಂದು ಭಾವಿಸಿದೆ,” ಎಂದು ಕ್ಯಾಪ್ಷನ್ ಹಾಕಿ ಕೈಫಿ ಖಲೀಲ್‌ರನ್ನು ಟ್ಯಾಗ್ ಮಾಡಿದ್ದಾರೆ ಎಮ್ಮಾ.

ಭಾರೀ ವೈರಲ್ ಆಗಿರುವ ಈ ಹಾಡಿಗೆ ಸಂಗೀತ ಪ್ರಿಯರಿಂದ 9,62,000 ವೀಕ್ಷಣೆಗಳು ಲಭಿಸಿವೆ. ಖುದ್ದು ಕೈಫಿ ಖಲೀಲ್ ಎಮ್ಮಾರ ಈ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹೃದಯ ಹಾಗೂ ಗುಲಾಬಿಯ ಎಮೋಜಿ ಮೂಲಕ ಕೈಫಿ ಈ ಹಾಡಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read