ಎರಡು ವರ್ಷದ ಸಂಭ್ರಮದಲ್ಲಿ ದುನಿಯಾ ವಿಜಯ್ ನಟನೆಯ ‘ಸಲಗ’

ಸ್ಯಾಂಡಲ್ವುಡ್ ನಲ್ಲಿ ಹೊಸ ಅಲೆ ಮೂಡಿಸಿದ 'ಕೋಟಿಗೊಬ್ಬ 3', 'ಸಲಗ': ಅಭಿಮಾನಿಗಳಲ್ಲಿ ಇಮ್ಮಡಿಸಿದ ಹಬ್ಬದ ಸಂಭ್ರಮ | Kannada Dunia | Kannada News | Karnataka News | India News

2021 ಅಕ್ಟೋಬರ್ 14 ರಂದು ರಾಜ್ಯದ್ಯಂತ ಬಿಡುಗಡೆಯಾಗಿದ್ದ ಸಲಗ ಬಾಕ್ಸ್ ಆಫೀಸ್ ದೂಳೆಬ್ಬಿಸುವ ಮೂಲಕ ಭರ್ಜರಿ ಪ್ರದರ್ಶನ ಕಂಡಿತ್ತು ಇಂದು ಈ ಸಿನಿಮಾ ಎರಡು ವರ್ಷ ಪೂರೈಸಿದೆ. ದುನಿಯಾ ವಿಜಯ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿದ್ದ ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ವೇಣುಸ್ ಎಂಟರ್ಟೈನರ್ ಬ್ಯಾನರ್ ನಡಿ ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದರು.

ಈ ಸಿನಿಮಾದಲ್ಲಿ ದುನಿಯಾ ವಿಜಯ್ ಗೆ ಜೋಡಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದು, ಡಾಲಿ ಧನಂಜಯ್ ಸೇರಿದಂತೆ ನಾಗಭೂಷಣ್, ಅಚ್ಯುತ್ ಕುಮಾರ್, ಸಂಪತ್ ಮೈತ್ರೆಯ, ಯಶ್ವಂತ್ ಶೆಟ್ಟಿ, ಉಷಾ ರವಿಶಂಕರ್, ನೀನಾಸಮ್ ಅಶ್ವತ್, ರಾಕ್ಲೈನ್ ಸುಧಾಕರ್, ಅಪೂರ್ವ, ದಿನೇಶ್  ತೆರೆ ಹಂಚಿಕೊಂಡಿದ್ದಾರೆ.

ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ದುನಿಯಾ ವಿಜಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ʼಸಲಗʼ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read