ಈ ಗ್ರಹಗಳ ದೋಷದಿಂದ ಕಾಡುತ್ತೆ ಆರೋಗ್ಯ ಸಂಬಂಧಿ ಸಮಸ್ಯೆ

 

ಮಹಿಳೆಯರ ಜಾತಕದಲ್ಲಿ ಚಂದ್ರನ ಸ್ಥಾನ ಅಶುಭವಾಗಿದ್ದಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಗರ್ಭಪಾತ, ಒತ್ತಡ, ದೈಹಿಕ ದೌರ್ಬಲ್ಯ ಸೇರಿದಂತೆ ಅನೇಕ ರೋಗಗಳು ಕಾಡಲು ಶುರುವಾಗುತ್ತವೆ. ಇದಕ್ಕೆ ಚಂದ್ರನ ಬೇರೆ ಬೇರೆ ಸ್ಥಾನ ಕಾರಣವಾಗುತ್ತದೆ.

ಚಂದ್ರ ಗ್ರಹ ಶನಿ, ಮಂಗಳ, ರಾಹು, ಕೇತುವಿನಿಂದ ಪೀಡಿತನಾಗಿದ್ದಲ್ಲಿ ಅಂಥ ಮಹಿಳೆಯರಿಗೆ ಮುಟ್ಟಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.

ಚಂದ್ರ ಮಹಿಳೆಯರನ್ನು ಪ್ರತಿನಿಧಿಸುವ ಗ್ರಹ. ಚಂದ್ರ ಪಾಪ ಗ್ರಹಗಳ ಪ್ರಭಾವಕ್ಕೊಳಗಾಗಿದ್ದರೆ ಅಥವಾ ಬಲಹೀನನಾಗಿದ್ದರೆ ಆ ಮಹಿಳೆ ಮೇಲೆ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ.

ಚಂದ್ರ ದುರ್ಬಲನಾಗಿದ್ದರೆ ಮಾನಸಿಕ ಸಮಸ್ಯೆ, ಒತ್ತಡ ಕಾಡುತ್ತದೆ.

ಜಾತಕದಲ್ಲಿ ಶನಿ-ಮಂಗಳ ಉನ್ನತ ಸ್ಥಾನದಲ್ಲಿದ್ದು, ಕ್ರೂರ ಗ್ರಹದ ಪ್ರಭಾವ ಇದ್ರ ಮೇಲಿದ್ದರೆ ರಕ್ತ ಸಂಬಂಧಿ ಸಮಸ್ಯೆ ಮಹಿಳೆಯರನ್ನು ಕಾಡುತ್ತದೆ.

ಜಾತಕದ ಐದನೇ ಸ್ಥಾನದಲ್ಲಿ ಕ್ರೂರ ಹಾಗೂ ಪಾಪದ ಗ್ರಹ ಬಂದಲ್ಲಿ, ಐದನೇ ಸ್ಥಾನದಲ್ಲಿ ಸೂರ್ಯ, ಶನಿ, ರಾಹು, ಕೇತು ಮಂಗಳವಾಗಿದ್ದರೆ ಸ್ತ್ರೀಗೆ ಗರ್ಭಧಾರಣೆ ಸಮಸ್ಯೆ ಕಾಡುತ್ತದೆ.

ಜಾತಕದಲ್ಲಿ ಕಾಡುವ ಸಮಸ್ಯೆಗೆ ಜ್ಯೋತಿಷ್ಯದಲ್ಲಿ ಪರಿಹಾರವನ್ನೂ ಹೇಳಲಾಗಿದೆ. ಜಾತಕದಲ್ಲಿ ಸೂರ್ಯ ಗ್ರಹ ಸಂಬಂಧಿ ಸಮಸ್ಯೆ ಕಂಡು ಬಂದಲ್ಲಿ ಪ್ರತಿದಿನ ಸೂರ್ಯನಿಗೆ ಜಲವನ್ನು ಅರ್ಪಿಸಬೇಕು.

ಶನಿ ದೋಷ ನಿವಾರಣೆಗೆ ಬೂಟ್-ಚಪ್ಪಲಿಯನ್ನು ದಾನವಾಗಿ ನೀಡಿ.

ರಾಹು-ಕೇತು ದೋಷ ದೂರ ಮಾಡಲು ಶನಿವಾರ ಅಶ್ವತ್ಥ ಪೂಜೆ ಮಾಡಿ. 7 ಪ್ರದಕ್ಷಿಣೆ ಮಾಡಿ.

ಚಂದ್ರ ದೋಷ ನಿವಾರಣೆಗೆ ಶಿವ ಪೂಜೆ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read