ʼಡ್ರೈ ಪ್ರೂಟ್ಸ್ʼ ನಿಂದ ಆರೋಗ್ಯ ಮಾತ್ರವಲ್ಲ ವೃದ್ಧಿಯಾಗುತ್ತೆ ಸೌಂದರ್ಯ

ಡ್ರೈ ಪ್ರೂಟ್ಸ್ ಗಳು ಆರೋಗ್ಯಕ್ಕೆ ತುಂಬಾ ಉತ್ತಮ ಎಂಬುದು ಎಲ್ಲರಿಗೂ ತಿಳಿದೇ ಇದೆ. ಹಾಗೇ ಇದರಿಂದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಹೌದು, ಡ್ರೈ ಪ್ರೂಟ್ಸ್ ಗಳನ್ನು ನಿಯಮಿತವಾಗಿ ಸೇವಿಸಿದರೆ ಅದರಿಂದ ತೂಕ ಕೂಡ ಇಳಿಸಿಕೊಳ್ಳಬಹುದು.

ಬಾದಾಮಿಯಲ್ಲಿ ವಿಟಮಿನ್ ಇ ಇರುವ ಕಾರಣ ಚರ್ಮಕ್ಕೆ ಯಾವಾಗಲೂ ತೇವಾಂಶ ನೀಡುವುದು. ಕೆಲವು ಬಾದಾಮಿಯನ್ನು ರಾತ್ರಿ ನೀರಿನಲ್ಲಿ ಹಾಕಿ ನೆನೆಸಿಡಬೇಕು. ಮೊದಲಿಗೆ ಬಾದಾಮಿಯ ಸಿಪ್ಪೆ ತೆಗೆದು, ಬಳಿಕ ಅದನ್ನು ಬಾಳೆಹಣ್ಣಿನ ಜೊತೆಗೆ ಸೇರಿಸಿಕೊಂಡು ರುಬ್ಬಿ ಪೇಸ್ಟ್ ಮಾಡಬೇಕು.

4-5 ನಿಮಿಷ ಕಾಲ ಈ ಮಿಶ್ರಣ ಬಳಸಿಕೊಂಡು ಮುಖಕ್ಕೆ ಸ್ಕ್ರಬ್ ಮಾಡಿಕೊಳ್ಳಿ. ಬಳಿಕ ಮುಖವನ್ನು ತಣ್ಣಗಿನ ನೀರಿನಿಂದ ತೊಳೆಯಿರಿ. ಚರ್ಮದ ಸತ್ತಕೋಶವನ್ನು ಇದು ತೆಗೆಯುವುದು ಮತ್ತು ಚರ್ಮದಲ್ಲಿನ ಧೂಳು ಹಾಗೂ ಕಲ್ಮಷ ನಿವಾರಣೆ ಮಾಡಿ ಮುಖಕ್ಕೆ ಕಾಂತಿ ನೀಡುವುದು.

ನಾಲ್ಕು ವಾಲ್ ನಟ್ ನ್ನು ರುಬ್ಬಿಕೊಳ್ಳಿ ಮತ್ತು ಇದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಮಾಸ್ಕ್ ರೀತಿ ಹಚ್ಚಿಕೊಳ್ಳಿ. 10-15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಫ್ರಿಡ್ಜ್ ನಲ್ಲಿಟ್ಟಿರುವ ನೀರಿನಿಂದ ಮುಖ ತೊಳೆಯಿರಿ. ಇದು ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕುವುದು ಮತ್ತು ವಯಸ್ಸಾಗುವಂತಹ ಲಕ್ಷಣಗಳು ಬರದಂತೆ ತಡೆಯುವುದು.

ಚರ್ಮದಲ್ಲಿರುವಂತಹ ವಿಷಕಾರಿ ಅಂಶವನ್ನು ತೆಗೆದುಹಾಕಲು ಒಣದ್ರಾಕ್ಷಿಯನ್ನು ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಕೆಲವು ಒಣದ್ರಾಕ್ಷಿಯನ್ನು ಪೇಸ್ಟ್ ಮಾಡಿಕೊಂಡು, ಅದಕ್ಕೆ ಸ್ವಲ್ಪ ಹಾಲು ಹಾಕಿ. ಈ ಪೇಸ್ಟ್ ನಿಂದ ಮುಖಕ್ಕೆ ಕೆಲವು ನಿಮಿಷಗಳ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ ಬಳಿಕ ನೀರಿನಿಂದ ತೊಳೆಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read