‘ಕುಡಿದು’ ಮದುವೆಗೆ ಬಂದ ಅತಿಥಿಗೆ ಕಳ್ಳನೆಂದು ಭಾವಿಸಿ ಥಳಿತ | Watch

ಉತ್ತರ ಪ್ರದೇಶದ ಡಿಯೋರಿಯಾದಲ್ಲಿ, ಮದ್ಯದ ಅಮಲಿನಲ್ಲಿ ಮದುವೆಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಆಘಾತಕಾರಿ ಅನುಭವವಾಗಿದೆ. ಮದುವೆ ಮೆರವಣಿಗೆ ವೇಳೆ ಅಮಲಿನ ಕಾರಣಕ್ಕೆ ದಿಕ್ಕು ತಪ್ಪಿದ ಆತ, ಅಂತಿಮವಾಗಿ ಅಪರಿಚಿತರೊಬ್ಬರ ಮನೆ ಬಾಗಿಲು ತಟ್ಟಿದ್ದು, ಕಳ್ಳನೆಂದು ಭಾವಿಸಿದ ಅವರು ಹಿಗ್ಗಾಮುಗ್ಗಾ ತದುಕಿದ್ದಾರೆ. ಬುಧವಾರ ರಾತ್ರಿ ಗೋರಖ್‌ಪುರದಿಂದ ಆರಂಭವಾದ ಮದುವೆ ಮೆರವಣಿಗೆಯು ತಾರ್ಕುಲ್ವಾ ಗ್ರಾಮದ ಸ್ಥಳೀಯ ಮದುವೆ ಮಂಟಪದ ಬಳಿ ಬಂದಾಗ ಅತಿಥಿ ದಾರಿ ತಪ್ಪಿದ್ದರು ಎನ್ನಲಾಗಿದೆ.

ಈ ಪ್ರದೇಶದಲ್ಲಿ ಕಳ್ಳರ ಹಾವಳಿ ವಿಪರೀತವಿದ್ದ ಕಾರಣ ಹಾಗೂ ಅವನ ನಡವಳಿಕೆ ಅನುಮಾನಕ್ಕೆ ಕಾರಣವಾಗಿದ್ದು, ಸ್ಥಳೀಯರು ಅವನನ್ನು ಕಳ್ಳನೆಂದು ಭಾವಿಸಿದ್ದಾರೆ. ಅಲ್ಲದೇ ಆತ ಮನೆ ಬಾಗಿಲು ತಟ್ಟಿದ ನಿವಾಸಿಗಳೂ ಸಹ ಕಿರುಚಿಕೊಂಡಿದ್ದರು. ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಳ್ಳತನದಿಂದಾಗಿ ಈ ಗೊಂದಲ ಉಂಟಾಗಿರಬಹುದು ಎಂದು ಹೇಳಲಾಗಿದೆ.

ಮನೆ ನಿವಾಸಿಗಳು ಕಿರುಚಿಕೊಂಡ ಕಾರಣ ಧಾವಿಸಿ ಬಂದ ಗ್ರಾಮಸ್ಥರು ಅವನನ್ನು ಹಿಡಿದಿದ್ದು, ಆತ ವಿವರಣೆ ನೀಡುವ ಮುನ್ನವೇ ಥಳಿಸಲು ಆರಂಭಿಸಿದ್ದಾರೆ. ಘಟನೆಯ ವೀಡಿಯೊವನ್ನು ಉತ್ತರಪ್ರದೇಶ ಸುದ್ದಿಸಂಸ್ಥೆಯೊಂದು ಹಂಚಿಕೊಂಡಿದ್ದು, ವ್ಯಕ್ತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿರುವುದನ್ನು ತೋರಿಸುತ್ತದೆ.

ಡಿಯೋರಿಯಾದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಕಳ್ಳರೆಂದು ತಪ್ಪಾಗಿ ಭಾವಿಸಿ ದಂಪತಿಯನ್ನು ಇದೇ ರೀತಿ ಥಳಿಸಿ ಮರಕ್ಕೆ ಕಟ್ಟಿ ಹಾಕಲಾಗಿತ್ತು. ಈ ಘಟನೆ ಸಂಬಂಧ ಪೊಲೀಸರು ಗ್ರಾಮದ ಮುಖಂಡ ಸೇರಿದಂತೆ ಐವರನ್ನು ಬಂಧಿಸಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read