ಅಮಲಿನಲ್ಲಿ ಮಹಿಳೆ ಮೇಲೆ ಮನಸೋ ಇಚ್ಛೆ ಹಲ್ಲೆ ; ನೆರವಿಗೆ ಧಾವಿಸದೆ ಮೂಕಪ್ರೇಕ್ಷಕರಾದ ಜನ | ಶಾಕಿಂಗ್‌ ವಿಡಿಯೋ

ಉತ್ತರ ಪ್ರದೇಶದ ಹಾಪುರ್‌ನಲ್ಲಿ ಗುರುವಾರ ಅಮಲಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ನಡುರಸ್ತೆಯಲ್ಲಿ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಆತ ತನ್ನ ಬಾಯಿಗೆ ಬಂದಂತೆ ಬೈಯಲು ಶುರು ಮಾಡಿದಾಗ, ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಆತ ಆಕೆಗೆ ಕಪಾಳಮೋಕ್ಷ ಮಾಡಿ ಒದ್ದಿದ್ದಾನೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಜಸ್ರೂಪ್‌ನಗರ ದಸ್ತೋಯಿ ರಸ್ತೆಯ ನಿವಾಸಿಯಾಗಿರುವ ಮಹಿಳೆ ತನ್ನ ಮನೆಯ ಹೊರಗೆ ನಿಂತಿದ್ದಾಗ, ಆರೋಪಿ ಅಮಲೇರಿದ ಸ್ಥಿತಿಯಲ್ಲಿ ಬಂದು ಆಕೆಯನ್ನು ಬಾಯಿಗೆ ಬಂದಂತೆ ನಿಂದಿಸಲು ಶುರುಮಾಡಿದ್ದಾನೆ. ಮಹಿಳೆ ಇದನ್ನು ಪ್ರತಿಭಟಿಸಿದಾಗ, ಆತ ಪ್ರತಿಕ್ರಿಯೆಯಾಗಿ ಪದೇ ಪದೇ ಆಕೆಗೆ ಕಪಾಳಮೋಕ್ಷ ಮಾಡಿ ಒದ್ದಿದ್ದಾನೆ. ಇಷ್ಟೆಲ್ಲಾ ನಡೆಯುತ್ತಿದ್ದರೂ, ಸುತ್ತ ನಿಂತಿದ್ದ ಜನರು ಏನೂ ಮಾಡದೆ ಮೂಕರಾಗಿ ನೋಡುತ್ತಿದ್ದರು.

ದೈನಿಕ್ ಭಾಸ್ಕರ್ ಉಲ್ಲೇಖಿಸಿರುವ ಪೊಲೀಸ್ ಮೂಲಗಳ ಪ್ರಕಾರ, ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಸಾರ್ವಜನಿಕರ ಕಣ್ಮುಂದೆಯೇ ಹಲ್ಲೆ ನಡೆದಿದ್ದರೂ, ಯಾರೂ ಕೂಡ ಆರಂಭದಲ್ಲಿ ಆ ವ್ಯಕ್ತಿಯನ್ನು ತಡೆಯಲು ಮುಂದಾಗಿಲ್ಲ. ಆಘಾತಕ್ಕೊಳಗಾದ ಮಹಿಳೆ, ವ್ಯಕ್ತಿ ತನ್ನ ಹಿಂಸಾತ್ಮಕ ವರ್ತನೆಯನ್ನು ಮುಂದುವರೆಸುತ್ತಿದ್ದಂತೆ, 15 ಸೆಕೆಂಡ್‌ಗಳಲ್ಲಿ 20 ಕಪಾಳಮೋಕ್ಷಗಳನ್ನು ಸಹಿಸಿಕೊಂಡಿದ್ದಾರೆ.

ಸುತ್ತಮುತ್ತ ನಿಂತಿದ್ದವರ ನಿಷ್ಕ್ರಿಯತೆ ಆರೋಪಿಯನ್ನು ಇನ್ನಷ್ಟು ಪ್ರೇರೇಪಿಸಿದೆ “ಸುತ್ತಮುತ್ತ ನಿಂತಿದ್ದ ಜನರು ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಲಿಲ್ಲ” ಎಂದು ಅಧಿಕಾರಿಗಳು ಹೇಳಿದ್ದಾರೆ, ಅಲ್ಲದೆ ಆ ವ್ಯಕ್ತಿ “ನಿರ್ದಯವಾಗಿ ಆಕೆಯನ್ನು ಥಳಿಸಿದ್ದಾನೆ” ಎಂದಿದ್ದಾರೆ. ಕೊನೆಗೆ ಒಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಆ ಯುವಕನನ್ನು ತಳ್ಳಿ ದೂರ ಮಾಡಿದಾಗ ಮಾತ್ರ ಪರಿಸ್ಥಿತಿ ಶಾಂತವಾಗಿದೆ.

ದಾಳಿಕೋರನನ್ನು ತಳ್ಳಿ ದೂರ ಮಾಡಿದ ನಂತರ, ಮಹಿಳೆ ಚಪ್ಪಲಿಯಿಂದ ಹೊಡೆದು, ಆತ ರಸ್ತೆಗೆ ಬಿದ್ದ ನಂತರ ಒದ್ದು ತಿರುಗೇಟು ನೀಡಿದ್ದಾರೆ.

ಪೊಲೀಸ್ ದೂರು ದಾಖಲು

ನಂತರ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಔಪಚಾರಿಕ ದೂರು ದಾಖಲಿಸಿದ್ದಾರೆ. ನಂತರ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read