ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣರಾದ ಪೊಲೀಸರ ಅರೆಸ್ಟ್

ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಪೊಲೀಸರು ಹಿಡಿದು ದಂಡ ಹಾಕ್ತಾರೆ. ಆದರೆ ತಮಿಳುನಾಡಿನಲ್ಲಿ ಕುಡಿದ ಅಮಲಿನಲ್ಲಿ ಪೊಲೀಸ್​ ವಾಹನದಲ್ಲಿ ಅಡ್ಡಾಡಿದ್ದು ಮಾತ್ರವಲ್ಲದೇ ಬೊಲೆರೋ ಕಾರು, ಐದು ದ್ವಿಚಕ್ರ ವಾಹನಗಳು ಹಾಗೂ ಒಂದು ಬೈಸಿಕಲ್​ನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.‌

ಈ ಸಂಬಂಧ ಇಬ್ಬರು ಪೊಲೀಸ್​ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಶ್ರೀಧರ್ ಮತ್ತು ಅರುಳ್ ಮಣಿ ಎಂದು ಗುರುತಿಸಲಾದ ಇಬ್ಬರೂ ಪೊಲೀಸ್ ಸಿಬ್ಬಂದಿ ಘಟನೆ ನಡೆದ ಸಮಯದಲ್ಲಿ ಕುಡಿದ ಸ್ಥಿತಿಯಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಇಬ್ರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಚಲಾಯಿಸುತ್ತಿದ್ದ ಪೊಲೀಸ್ ಅಧಿಕಾರಿ ಶ್ರೀಧರ್ ನನ್ನು ಬಂಧಿಸಿ ರಿಮಾಂಡ್ ಗೆ ಕಳುಹಿಸಲಾಗಿದೆ.

ವಾಹನ ಚಲಾಯಿಸುತ್ತಿದ್ದ ಶ್ರೀಧರ್ ರಾಣಿಪೇಟೆ ಜಿಲ್ಲೆಯ ಅವಳೂರು ಪೊಲೀಸ್ ಠಾಣೆಯ ಪೊಲೀಸ್ ಪೇದೆ ಹಾಗೂ ಸಹ-ಪ್ರಯಾಣಿಕ ಅರುಲ್ ಮಣಿ ತಮಿಳುನಾಡು ಪೊಲೀ ಪೊಲೀಸ್ ಪಡೆಯಲ್ಲಿ ಪೇದೆ ಆಗಿದ್ದಾರೆ.ಇವರಿಬ್ಬರು ವಿರುಗಂಬಾಕ್ಕಂನಿಂದ ಅಭಿರಾಮಪುರಂನಲ್ಲಿರುವ ತಮಿಳುನಾಡು ಕಮಾಂಡೋ ಫೋರ್ಸ್ ಶಾಲೆಗೆ ಪ್ರಯಾಣಿಸುತ್ತಿದ್ದರು. ಹೆಚ್ಚಿನ ವಿಚಾರಣೆಗಾಗಿ ಇಬ್ಬರೂ ಪೊಲೀಸ್ ಸಿಬ್ಬಂದಿಯನ್ನು ಗಿಂಡಿಯ ಸಂಚಾರ ತನಿಖಾ ವಿಭಾಗಕ್ಕೆ ಕರೆದೊಯ್ಯಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read