ಬೆಳಗಾವಿ: ಮಾದಕ ವಸ್ತುಗಳ ವಿರುದ್ಧ ಸಮರ ಸಾರುರುವ ಬೆಳಗಾವಿ ಪೊಲೀಸರು ಹೆರಾಯಿನ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ವೈಭವ ಪ್ರಕಾಶ ಕುರಣಿ (21), ಓಂಕಾರ ಚಂದ್ರಶೇಖರ ಜೋಶಿ (19) ಬಂಧಿತ ಆರೋಪಿಗಳು. ಇಬ್ಬರೂ ಬೆಳಗಾವಿ ನಗರದ ಮಹಾದ್ವಾರ ರೋಡ್ ನ ಸಂಭಾಜಿ ಗಲ್ಲಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಹೆರಾಯಿನ್ ನನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 18,000 ರೂ. ಮೌಲ್ಯದ 24.87 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.