BIG NEWS: ಮನೆಯ ಆವರಣದಲ್ಲೇ ಹೂವಿನ ಗಿಡಗಳೊಂದಿಗೆ ಗಾಂಜಾ ಬೆಳೆದ ಆರೋಪಿ ಅರೆಸ್ಟ್

ಮೈಸೂರು: ಗಾಂಜಾ ವ್ಯಸನಕ್ಕೆ ಅಡಿಕ್ಟ್ ಆಗಿದ್ದ ವ್ಯಕ್ತಿಯೊಬ್ಬ ಮನೆಯ ಆವರಣದಲ್ಲೇ ಹೂವಿನ ಗಿಡಗಳ ಜೊತೆ ಗಾಂಜಾ ಗಿಡಗಳನ್ನು ಬೆಳೆಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಶ್ವನಾಥ್ ಬಂಧಿತ ಆರೋಪಿ. ಮನೆಯ ಆವರಣದಲ್ಲಿಯೇ ಹೂವಿನ ಗಿಡಗಳ ಮಧ್ಯೆ ಎರಡು ಗಾಂಜಾ ಗಿಡಗಳನ್ನು ಬೆಳಿಸಿದ್ದ.

ಹೂವಿನ ಗಿಡಗಳ ಜೊತೆ ಗಾಂಜಾ ಗಿಡಗಳು 5-6 ಅಡಿ ಎತ್ತರ ಬೆಳೆದಿದ್ದವು. ಈ ಬಗ್ಗೆ ಮಾಹಿತಿ ತಿಳಿದ ಹುಣಸೂರು ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. 6 ಕೆಜಿಯಷ್ಟಿದ್ದ ಗಾಂಜಾ ಹಸಿಗಿಡವನ್ನು ವಶಕ್ಕೆ ಪಡೆದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read