SSLC ವಿದ್ಯಾರ್ಹತೆ ಹೊಂದಿದವರಿಗೆ ಗುಡ್ ನ್ಯೂಸ್: 2000 ಚಾಲಕರ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರು: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಫೆಬ್ರವರಿ 3 ರಂದು ಶುಕ್ರವಾರ ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆವರೆಗೆ ಚಾಲಕರ ಹುದ್ದೆಗೆ ನೇರ ಸಂದರ್ಶನ ನಡೆಯಲಿದೆ.

ವಾಕ್ ಇನ್ ಡ್ರೈವ್ ನಲ್ಲಿ 2000 ಚಾಲಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಮೆ. ಲಿತಿಯಂ ಅರ್ಬನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವಾಕ್ ಇನ್ ಡ್ರೈವ್ ನಲ್ಲಿ ಭಾಗವಹಿಸಲಿದೆ.

ಎಸ್ಎಸ್ಎಲ್ಸಿ ವಿದ್ಯಾರ್ಹತೆಯೊಂದಿಗೆ ಲಘು ವಾಹನ ಚಾಲನ ಪರವಾನಿಗೆ ಹೊಂದಿದ 50 ವರ್ಷದೊಳಗಿನವರು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಬಯೋಡೇಟಾದೊಂದಿಗೆ, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಕೋವಿಡ್ ಲಸಿಕೆ ಪ್ರಮಾಣ ಪತ್ರ, ಪಾಸ್ ಪೋರ್ಟ್ ಅಳತೆಯ ಮೂರು ಫೋಟೋಗಳೊಂದಿಗೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ವಿಳಾಸ: ಮೆ. ಲಿತಿಯಂ ಅರ್ಬನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, 158, ಒಂದನೇ ಮಹಡಿ, ಸೀತಾರಾಮ ಪಾಳ್ಯ, ಹೂಡಿ, ಬೆಂಗಳೂರು -48, ಮಾಹಿತಿಗಾಗಿ 99804 68168 ಸಂಪರ್ಕಿಸಬಹುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read