ಬೆಂಗಳೂರು: ನಮ್ಮ ಮೆಟ್ರೋ ಪಿಂಕ್ ಲೈನ್ ನಲ್ಲಿ ಚಾಲಕರಹಿತ ರೈಲು ಅನಾವರಣ ಮಾಡಲಾಗಿದೆ. ಬಿಎಂಆರ್‌ಸಿಎಲ್ ಅನಾವರಣ ಮಾಡಿದ್ದು, ಡಿಸೆಂಬರ್ 15 ಅಥವಾ 16ರಂದು ಹೊಸ ರೈಲುಗಳು ಬಿಎಂಆರ್‌ಸಿಎಲ್ ಡಿಪೋ ತಲುಪಲಿವೆ.
ಮೊದಲ ಪ್ರೋಟೋಟೈಪ್ ರೈಲು ಬಿಡುಗಡೆ ಮಾಡಲಾಗಿದ್ದು, ಚಾಲಕರಹಿತ ಹೊಸ ರೈಲು ಬೆಂಗಳೂರಿನ ಕೊತ್ತನೂರು ಡಿಪೋವನ್ನು ತಲುಪಲಿವೆ. ಮೊದಲ ಹಂತದಲ್ಲಿ ಪಿಂಕ್ ಲೈನ್ ಗೆ ಆರು ಡ್ರೈವರ್ಲೆಸ್ ರೈಲುಗಳು ಬರಲಿವೆ. ಇಂದು ಮೊದಲ ಪ್ರೋಟೋಟೈಪ್ ರೈಲಿನ ರೋಲ್ ಔಟ್ ಮಾಡಲಾಗಿದೆ.
ಕಾಳೇನ ಅಗ್ರಹಾರ- ನಾಗವಾರದ ನಡುವೆ ಪಿಂಕ್ ಲೈನ್ ರೈಲು ಸಂಚರಿಸಲಿದೆ. 21 ಕಿಲೋಮೀಟರ್ ಉದ್ದದ ಪಿಂಕ್ ಲೈನ್ ನಲ್ಲಿ 18 ಸ್ಟೇಷನ್ ಗಳು ಇವೆ. 12 ಅಂಡರ್ ಗ್ರೌಂಡ್, ಆರು ಎಲಿವೇಟೆಡ್ ಮೆಟ್ರೋ ಸ್ಟೇಷನ್ ಗಳಿವೆ. 2026ರ ಮೇ ತಿಂಗಳಲ್ಲಿ ಕಾಳೇನ ಅಗ್ರಹಾರ ತಾವರೆಕೆರೆ ನಡುವೆ ಸಂಚರಿಸಲಿವೆ.
ಆರು ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು ಬಿಎಂಆರ್‌ಸಿಎಲ್ ಸಿದ್ದತೆ ಮಾಡಿಕೊಂಡಿದೆ. ರೈಲುಗಳು ಬರುತ್ತಿದ್ದಂತೆ ವಾಣಿಜ್ಯ ಸಂಚಾರ ಆರಂಭವಾಗಲಿದೆ. ವಾಣಿಜ್ಯ ಸಂಚಾರ ಆರಂಭಿಸಲು ಬಿಎಮ್ಆರ್‌ಸಿಎಲ್ ಸಿದ್ದತೆ ಮಾಡಿಕೊಂಡಿದೆ. ಮೆಟ್ರೋ ಪಿಂಕ್ ಲೈನ್ ನಲ್ಲಿ ಒಟ್ಟು 23 ಡ್ರೈವರ್ಲೆಸ್ ರೈಲುಗಳು ಸಂಚರಿಸಲಿವೆ. 23 ಡ್ರೈವರ್ಲೆಸ್ ರೈಲುಗಳಿಗೆ ಬಿಎಂಆರ್ಸಿಎಲ್ ಆರ್ಡರ್ ನೀಡಿದೆ.
