ಮದುವೆಯಾಗಲು ನಿರಾಕರಿಸಿದ ಪ್ರಿಯಕರ: ಅತ್ಯಾಚಾರಕ್ಕೊಳಗಾದ ಮಗಳನ್ನೇ ಹತ್ಯೆಗೈದ ಮಹಿಳೆ

ನವದೆಹಲಿ: ದೆಹಲಿಯಲ್ಲಿ ಗೆಳೆಯ ಮಗಳನ್ನು ದೂರವಿಟ್ಟ ಕಾರಣ ತಾಯಿ 5 ವರ್ಷದ ಅತ್ಯಾಚಾರ ಸಂತ್ರಸ್ತೆಯಾದ ಪುತ್ರಿಯನ್ನು ಕೊಂದಿದ್ದಾಳೆ.

ಅತ್ಯಾಚಾರ ಸಂತ್ರಸ್ತೆ ಹುಡುಗಿಯನ್ನು ಸ್ವೀಕರಿಸಲು ಆಕೆಯ ಗೆಳೆಯ ನಿರಾಕರಿಸಿದ ಕಾರಣ ಹತಾಶೆಯಿಂದ ಮಹಿಳೆ ತನ್ನ ಐದು ವರ್ಷದ ಮಗಳನ್ನು ಕೊಂದಿದ್ದಾಳೆ.

ವಾಯವ್ಯ ದೆಹಲಿಯ ಅಶೋಕ್ ವಿಹಾರ್‌ನಿಂದ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಬಾಲಕಿಯನ್ನು ಆಕೆಯ ತಾಯಿ ಕತ್ತು ಹಿಸುಕಿ ಕೊಂದಿದ್ದಾರೆ ಎಂದು  ಮಹಿಳೆಯನ್ನು ಬಂಧಿಸಿದ ನಂತರ ಪೊಲೀಸರು ತಿಳಿಸಿದ್ದಾರೆ.

ಆಕೆಯ ಕುತ್ತಿಗೆಯ ಮೇಲೆ ಕತ್ತು ಹಿಸುಕಿದ ಗುರುತುಗಳು ಮತ್ತು ದೇಹದ ಮೇಲೆ ಇತರ ಗಾಯಗಳಿದ್ದವು. ದೀಪ್ ಚಂದ್ ಬಂಧು ಆಸ್ಪತ್ರೆಯು ಬಾಲಕಿಯನ್ನು ಕರೆತಂದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿತ್ತು.

ಮಹಿಳೆಯ ಮೊದಲ ಪತಿ ಅವಳನ್ನು ತೊರೆದಿದ್ದ. ನಂತರ ಅವರು ಇನ್ಸ್ಟಾಗ್ರಾಮ್ನಲ್ಲಿ ರಾಹುಲ್ ಅವರನ್ನು ಪರಿಚಯಿಸಿಕೊಂಡು ಭೇಟಿಯಾದರು. ಆಕೆ ರಾಹುಲ್ ನನ್ನು ಮದುವೆಯಾಗುವ ಭರವಸೆಯೊಂದಿಗೆ ಹಿಮಾಚಲ ಪ್ರದೇಶದಿಂದ ದೆಹಲಿಗೆ ಬಂದಿದ್ದಳು. ಆದರೆ ಅವನು ಮತ್ತು ಅವನ ಕುಟುಂಬದವರು ತನ್ನ ಮಗಳನ್ನು ಸ್ವೀಕರಿಸಲು ನಿರಾಕರಿಸಿದೆ.

ದೆಹಲಿಗೆ ಬರುವ ಮೊದಲು ಅವರು ವಾಸಿಸುತ್ತಿದ್ದ ಹಿಮಾಚಲದಲ್ಲಿ ಸಂಬಂಧಿಕರಿಂದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.

ಕಸ್ಟಡಿಗೆ ಪಡೆದ ತಾಯಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದ್ದು, ಸುಮಾರು ಮೂರು ಗಂಟೆಗಳ ಕಾಲ ಶವದೊಂದಿಗೆ ಕುಳಿತು ನಿರ್ಜೀವ ದೇಹವನ್ನು ಕೈಯಲ್ಲಿ ಹಿಡಿದುಕೊಂಡು ಅಳುತ್ತಿದ್ದಳು.

ಕೊಲೆಯ ವಿಚಾರ ತಪ್ಪಿಸಲು ಅವಳು ಆರಂಭದಲ್ಲಿ ಯಾರಿಗೂ ತಿಳಿಸಲಿಲ್ಲ. ಸಂಜೆ 6.15ರ ಸುಮಾರಿಗೆ ಶವದೊಂದಿಗೆ ವಾಹನದಲ್ಲಿ ಆಸ್ಪತ್ರೆಗೆ ಆಗಮಿಸಿದ ಆಕೆ, ಮಗು ಚೆನ್ನಾಗಿ ನಿದ್ದೆ ಮಾಡುತ್ತಿದ್ದು, ಕದಲದಿದ್ದಾಗ ಆಸ್ಪತ್ರೆಗೆ ಕರೆತಂದಿರುವುದಾಗಿ ವೈದ್ಯರಿಗೆ ತಿಳಿಸಿದ್ದಾಳೆ. ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದಾಗ ಜೋರಾಗಿ ಅಳಲು ಪ್ರಾರಂಭಿಸಿದ್ದಾಳೆ. ಆದರೆ, ಬಾಲಕಿಯ ಕತ್ತಿನ ಮೇಲಿನ ಗುರುತುಗಳ ಬಗ್ಗೆ ವೈದ್ಯರು ಕೇಳಿದಾಗ ಆಕೆಯ ವರ್ತನೆ ಬದಲಾಗಿದೆ. ಯಾವುದೇ ತೃಪ್ತಿಕರ ಉತ್ತರ ನೀಡದ ಕಾರಣ ಏನೋ ತಪ್ಪಾಗಿದೆ ಎಂದು ಶಂಕಿಸಿ ಆಸ್ಪತ್ರೆಯವರು ಸಂಜೆ 6.30ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದೆಹಲಿ ಪೊಲೀಸರು ಆರೋಪಿ ಮಹಿಳೆಯನ್ನು ಅಶೋಕ್ ವಿಹಾರ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read