ಚಳಿಗಾಲದಲ್ಲಿ ಈ ಪಾನೀಯವನ್ನು ಕುಡಿಯಿರಿ; ಕಾಯಿಲೆಗಳು ನಿಮ್ಮ ಬಳಿ ಸುಳಿಯುವುದೇ ಇಲ್ಲ….!

ಚಳಿಗಾಲದಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ ಸೋಂಕಿನಿಂದ ದೇಹವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಮನೆಯಲ್ಲೇ ಲಭ್ಯವಿರುವ ಕೆಲವು ಮಸಾಲೆ ಪದಾರ್ಥಗಳು ನಮ್ಮನ್ನು ಆರೋಗ್ಯವಾಗಿಡಲು ಸಹಕರಿಸುತ್ತವೆ. ಕೆಲವು ಪಾನೀಯಗಳನ್ನು ಚಳಿಗಾಲದಲ್ಲಿ ಕುಡಿಯುವುದರಿಂದ ಕಾಯಿಲೆಗಳು ನಮ್ಮ ಬಳಿ ಸುಳಿಯುವುದೇ ಇಲ್ಲ.

ಅವುಗಳಲ್ಲಿ ಪ್ರಮುಖವಾದದ್ದು ಅರಿಶಿನದ ಕಷಾಯ. ಚಳಿಗಾಲದಲ್ಲಿ ಅರಿಶಿನದ ಪಾನೀಯಗಳನ್ನು ಕುಡಿಯುವುದರಿಂದ ಫಿಟ್ ಮತ್ತು ಎನರ್ಜಿಟಿಕ್ ಆಗಿ ಉಳಿಯಬಹುದು. ಅರಿಶಿನವು ಒಂದು ಸೂಪರ್‌ಫುಡ್. ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಲ್ಲಿ ಇದು ಸಮೃದ್ಧವಾಗಿದೆ. ಈ ಎಲ್ಲಾ ಅಂಶಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಶೀತ, ಕೆಮ್ಮು ಮುಂತಾದ ಕಾಯಿಲೆಗಳಿಂದ ನಮ್ಮನ್ನು ದೂರವಿಡುತ್ತವೆ.

ಅರಿಶಿನದ ಕಷಾಯ ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತದೆ ಮತ್ತು ಶಕ್ತಿಯನ್ನು ತುಂಬುತ್ತದೆ. ಅರಿಶಿನದ ಈ ಪಾನೀಯವನ್ನು ತಯಾರಿಸುವುದು ಕೂಡ ಸುಲಭ. ಇದಕ್ಕಾಗಿ 1 ಚಮಚ ಅರಿಶಿನ ಪುಡಿ, 2 ಕಪ್ ನೀರು, 1/2 ಚಮಚ ಸೋಂಪಿನ ಕಾಳು , 1 ಇಂಚು ಶುಂಠಿ, 1 ಚಮಚ ಜೇನುತುಪ್ಪ, ಸ್ವಲ್ಪ ನಿಂಬೆ ರಸವನ್ನು ತೆಗೆದುಕೊಳ್ಳಿ. 2 ಕಪ್‌ ನೀರಿಗೆ ಅರಿಶಿನ ಪುಡಿ, ಶುಂಠಿ ಮತ್ತು ಸೋಂಪಿನ ಕಾಳನ್ನು ಹಾಕಿ ಕುದಿಸಿ. ಅದನ್ನು ಸೋಸಿಕೊಂಡು ಜೇನುತುಪ್ಪ ಮತ್ತು ನಿಂಬೆ ರಸ ಬೆರೆಸಿ ಬಿಸಿ ಬಿಸಿಯಾಗಿ ಕುಡಿಯಬೇಕು.

ಅರಿಶಿನದಲ್ಲಿ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಕರ್ಕ್ಯುಮಿನ್, ಸತು ಮತ್ತು ವಿಟಮಿನ್ ಸಿಯಂತಹ ಅಂಶಗಳಿವೆ. ಚಳಿಗಾಲದಲ್ಲಿ ಪ್ರತಿದಿನ ಈ ಅರಿಶಿನದ ಕಷಾಯವನ್ನು ಕುಡಿಯಿರಿ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತದಿಂದ ಪರಿಹಾರ ನೀಡುತ್ತದೆ. ಗಾಯ, ಸ್ನಾಯು ಸೆಳೆತ ಅಥವಾ ಕೀಲು ನೋವಿನಿಂದಲೂ ತಕ್ಷಣದ ಪರಿಹಾರವನ್ನು ನೀಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read