ಮಳೆಗಾಲದಲ್ಲಿ ಹೀಗೆ ಕಷಾಯ ಮಾಡಿ ಕುಡಿದು ಪರಿಣಾಮ ನೋಡಿ…!

ಮಳೆಗಾಲ ಬಂದಾಗ ಶೀತ, ಕೆಮ್ಮು ಶುರುವಾಗುತ್ತದೆ. ಟೀ – ಕಾಫಿ ಕುಡಿಯುವ ಬದಲು ಕಷಾಯ ಮಾಡಿಕೊಂಡು ಕುಡಿದರೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಷಾಯದ ಪುಡಿ ಮಾಡುವ ವಿಧಾನ ಇದೆ ನೋಡಿ.

ಬೇಕಾಗುವ ಸಾಮಾಗ್ರಿಗಳು:

ಜೀರಿಗೆ – 3 ಟೇಬಲ್ ಸ್ಪೂನ್, ಕೊತ್ತಂಬರಿ ಬೀಜ – 10 ಟೇಬಲ್ ಸ್ಪೂನ್, 2 ಟೀ ಸ್ಪೂನ್ – ಕಾಳುಮೆಣಸು, 6 – ಏಲಕ್ಕಿ, 8 – ಲವಂಗ, ½ ಟೀ ಸ್ಪೂನ್ – ಅರಿಶಿನ, ½ ಟೀ ಸ್ಪೂನ್ – ಶುಂಠಿ ಪುಡಿ.

ಮಾಡುವ ವಿಧಾನ:

ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಕೊತ್ತಂಬರಿ, ಜೀರಿಗೆ, ಕಾಳುಮೆಣಸು ಹಾಕಿ ಸಣ್ಣ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಏಲಕ್ಕಿ – ಲವಂಗ ಸೇರಿಸಿ ಸ್ವಲ್ಪ ಫ್ರೈ ಮಾಡಿಕೊಳ್ಳಿ.

ಇದು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ಅರಿಶಿನ ಪುಡಿ, ಶುಂಠಿ ಪುಡಿ ಸೇರಿಸಿ ಚೆನ್ನಾಗಿ ಪುಡಿ ಮಾಡಿಕೊಂಡು ಒಂದು ಗ್ಲಾಸ್ ಜಾರಿನಲ್ಲಿ ತುಂಬಿಸಿಕೊಳ್ಳಿ.

ಕಷಾಯ ಮಾಡುವಾಗ ಒಂದು ಪಾತ್ರೆಗೆ 2 ಗ್ಲಾಸ್ ನೀರು ಸೇರಿಸಿ ಅದು ಕುದಿ ಬಂದಾಗ ಕಷಾಯ ಪುಡಿ ಹಾಕಿ ಕುದಿಸಿ. ನಂತರ ಬೆಲ್ಲ ಸೇರಿಸಿ ಬಿಸಿ ಬಿಸಿ ಇರುವಾಗಲೇ ಕುಡಿಯಿರಿ. ಈ ಕಷಾಯಕ್ಕೆ ನೀರಿನ ಜತೆ ಹಾಲು ಕೂಡ ಸೇರಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read