ಹಲವು ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಅರಶಿನ ಬೆರೆಸಿದ ಹಾಲು ಕುಡಿಯಿರಿ

ಮಕ್ಕಳಿಗೆ ಶೀತವಾಗದಂತೆ ತಡೆಯಲು ಅರಶಿನ ಹಾಲನ್ನು ಕುಡಿಯಲು ಕೊಡಿ ಎಂದು ಮನೆಯಲ್ಲಿ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಇದಕ್ಕೆ ಮುಖ್ಯ ಕಾರಣ ಏನು ಗೊತ್ತೇ?

ಹಲವು ವರ್ಷಗಳ ಹಿಂದಿನಿಂದಲೂ ಅರಶಿನ ಹಾಲು ಭಾರತೀಯ ಸಂಪ್ರದಾಯದಲ್ಲಿ ಬೆರೆತಿದೆ. ಇದರ ಸೇವನೆಯಿಂದ ಹಲವು ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನಲಾಗಿದೆ. ಹಾಲಿನ ಕ್ಯಾಲ್ಸಿಯಂ ಜೊತೆ ಅರಶಿನದ ಗುಣಗಳು ಸೇರಿಕೊಂಡು ಅತ್ಯುತ್ತಮ ರೋಗ ನಿರೋಧಕಗಳ ಸೃಷ್ಟಿಯಾಗುತ್ತವೆ.

ಮಕ್ಕಳಿಗೆ ಬಿಡದೆ ಕಾಡುವ ಕೆಮ್ಮು ಅಥವಾ ಶೀತದ ಸಮಸ್ಯೆಗೆ ಇದು ಅತ್ಯುತ್ತಮ ಪರಿಹಾರ ನೀಡುತ್ತದೆ. ಹವಾಮಾನದಲ್ಲಿ ಬದಲಾವಣೆಯಾಗಿ ಮಕ್ಕಳಿಗೆ ಅಲರ್ಜಿಯಿಂದ ಕೆಮ್ಮು ಕಾಣಿಸಿಕೊಂಡರೆ ಅರಶಿನ ಹಾಲು ಅತ್ಯುತ್ತಮ ಮದ್ದಾಗಬಲ್ಲದು.

ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವ ಇದು ಶೀತ ಸಂಬಂಧಿ ಗಂಟಲು ನೋವಿನ ಸಮಸ್ಯೆಗೂ ಮುಕ್ತಿ ಹಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುತ್ತದೆ. ಕ್ಯಾನ್ಸರ್ ರೋಗಿಗಳಿಗೂ ಅರಶಿನ ಬೆರೆಸಿದ ಹಾಲು ಸೇವನೆ ಒಳ್ಳೆಯದು ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read