ಜರ್ಮನಿಯಲ್ಲಿ ಸೇತುವೆಯೊಂದನ್ನು 150 ಕೆಜಿ ಸ್ಫೋಟಕಗಳನ್ನು ಬಳಸಿ ಕೆಡವುತ್ತಿರುವ ವಿಡಿಯೋ ಆನ್ ಲೈನ್‌ನಲ್ಲಿ ವೈರಲ್ ಆಗಿದೆ. ಜರ್ಮನಿಯ ಲುಡೆನ್‌ಶೈಡ್‌ನಲ್ಲಿ 450 ಮೀಟರ್ ಉದ್ದದ ರಹ್ಮೆಡೆ ವ್ಯಾಲಿ ಸೇತುವೆಯನ್ನು ಸ್ಫೋಟಕ ಬಳಸಿ ಕೆಡವಲಾಗಿದ್ದು, ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
ಕಳಪೆ ಗುಣಮಟ್ಟದ್ದಾಗಿದ್ದರಿಂದ ಸೇತುವೆಯನ್ನು ಸಾರ್ವಜನಿಕ ಬಳಕೆಗೆ ನಿಷೇಧಿಸಿದ ವರ್ಷಗಳ ನಂತರ ಇದನ್ನು ಕೆಡವಲಾಗಿದೆ. ವರದಿಗಳ ಪ್ರಕಾರ, A 45 ರಹ್ಮೆಡೆಟಲ್ ಮೋಟರ್ ವೇ ಸೇತುವೆಯನ್ನು 2 ಡಿಸೆಂಬರ್ 2021 ರಿಂದ ಬಿರುಕುಗಳು ಮೂಡಿದ್ದರಿಂದ ಮತ್ತು ಹಾನಿಗೊಳಗಾಗಿದ್ದರಿಂದ ಮುಚ್ಚಲಾಗಿತ್ತು. ಹೀಗಾಗಿ ಭಾನುವಾರ ಈ ಸೇತುವೆಯನ್ನು ಧ್ವಂಸಗೊಳಿಸಲಾಯಿತು.
ಸೇತುವೆಯನ್ನು ಕೆಡವಲು 150 ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಪಕ್ಕದಲ್ಲಿದ್ದ ಕಟ್ಟಡಗಳನ್ನು ರಕ್ಷಿಸಲು ತಡೆಗೋಡೆ ರಚಿಸಲು 50 ಸ್ಟ್ಯಾಕ್ ಮಾಡಿದ ಕಂಟೈನರ್‌ಗಳನ್ನು ಬಳಸಲಾಗಿದೆ. ಸೇತುವೆ ಸ್ಫೋಟಗೊಂಡಾಗ ಧೂಳಿನಂತೆ ಚಿಮ್ಮಿ ನೆಲಕ್ಕುರುಳಿದೆ.
ಈ ಸೇತುವೆಯನ್ನು 1965 ಮತ್ತು 1968 ರ ನಡುವೆ ನಿರ್ಮಿಸಲಾಗಿತ್ತು. ಇದೀಗ ಈ ಸೇತುವೆಯನ್ನು ಕೆಡವಲಾಗಿದ್ದು, ವರದಿಗಳ ಪ್ರಕಾರ ಹೊಸ ಸೇತುವೆ ನಿರ್ಮಾಣಕ್ಕೆ ಐದು ವರ್ಷ ಬೇಕು.
https://twitter.com/openeysdown/status/1655325630857109505?ref_src=twsrc%5Etfw%7Ctwcamp%5Etweetembed%7Ctwterm%5E1655325630857109505%7Ctwgr%5E07c5c23bd84b8f83e90d1c48719c2efc6bd5b43c%7Ctwcon%5Es1_&ref_url=https%3A%2F%2Fwww.freepressjournal.in%2Fworld%2Fwatch-german-bridge-turns-into-ashes-after-a-controlled-blast-using-150-kg-explosives