ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಶನಿ ಎಂದು ಕರೆದಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವರು, ಸಾರ್ವಜನಿಕ ವಲಯದಲ್ಲಿರುವಾಗ ಸರಿಯಾಗಿ ಮಾತನಾಡಬೇಕು. ಯಾವುದೇ ಪಕ್ಷದವರಾಗಲಿ ಮಾತನಾಡುವಾಗ ಎಚ್ಚರದಿಂದ ಮಾತನಡಬೇಕು.
ಇಂತಹ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಆಗಲ್ಲ. ಯಾವುದೇ ಹೇಳಿಕೆ ನೀಡಿದರು ಜನ ನಮ್ಮನ್ನು ಅಳೆಯುತ್ತಾರೆ. ನಾನು ಹೇಳಿಕೆ ಕೊಟ್ರೆ ಅದರ ಮೇಲೆ ಜನ ನನ್ನನ್ನು ಅಳೆಯುತ್ತಾರೆ. ಜೊತೆಗೆ ತಿರುಚಿವಂತ ಕೆಲಸ ಕೂಡ ಆಗುತ್ತೆ. ಹಾಗಾಗಿ ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆಯರಿತು ಮಾತನಾಡಬೇಕು ಎಂದು ಹೇಳಿದರು.

 
			 
		 
		 
		 
		 Loading ...
 Loading ... 
		 
		 
		