ಇಂಜಕ್ಷನ್ ನೀಡಿ ವೈದ್ಯೆ ಪತ್ನಿಯನ್ನೇ ಕೊಲೆಗೈದ ಡಾ.ಮಹೇಂದ್ರ ರೆಡ್ಡಿ ಕೇಸ್ ಗೆ ಟ್ವಿಸ್ಟ್: 6 ತಿಂಗಳ ಬಳಿಕ ಕೊಲೆ ರಹಸ್ಯ ಬಯಲು

ಬೆಂಗಳೂರು: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆ ಡಾ.ಕೃತ್ತಿಕಾ ರೆಡ್ಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ವೈದ್ಯ ಪತಿಯೇ ಪತ್ನಿಯನ್ನು ಇಂಜಕ್ಷನ್ ಮೂಲಕ ಹತ್ಯೆಗೈದಿರುವುದು ೬ ತಿಂಗಳ ಬಳಿಕ ಬಯಲಾಗಿದೆ.

ಬೆಂಗಳೂರಿನ ವೈದ್ಯ ಡಾ.ಮಹೇಂದ್ರ ರೆಡ್ಡಿ, ವೈದ್ಯೆಯಾಗಿದ್ದ ತನ್ನ ಪತ್ನಿ ಕೃತ್ತಿಕಾ ರೆಡ್ಡಿಯನ್ನು ಅನಾರೋಗ್ಯ ವಿಷಯ ಮುಚ್ಚಿಟ್ಟಿದ್ದಕ್ಕೆ ಕೊಲೆ ಮಾಡಿದ್ದ ಎಂದು ಹೇಳಲಾಗಿತ್ತು. ಆದರೆ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮೃತ ಕೃತ್ತಿಕಾ ಸಹೋದರಿ ಡಾ. ನಿಖಿತಾ ಹೇಳುವ ಪ್ರಕಾರ ಡಾ.ಮಹೇಂದ್ರ ಮತ್ತೋರ್ವ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ, ತನ್ನ ಅಕ್ರಮ ಸಬಂಧ ಹಾಗೂ ಆಸ್ತಿ ಆಸೆಗಾಗಿ ತನ್ನ ಅಕ್ಕನನ್ನೇ ಇಂಜಕ್ಷನ್ ಕೊಟ್ಟು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಡಾ.ಕೃತ್ತಿಕಾ ರೆಡ್ಡ್ ಕೊಲೆ ರಹಸ್ಯ ೬ ತಿಂಗಳ ಬಳಿಕ ಎಫ್ ಎಸ್ ಎಲ್ ವರದಿಯಿಂದಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.

ಡಾ.ಕೃತ್ತಿಕಾ ರೆಡ್ಡಿ ಕೊಲೆ ಪೂರ್ವನಿಯೋಜಿತ ಕೃತ್ಯ. ತನ್ನ ಅಕ್ಕನ ಸಾವಿಗೆ ಭಾವ ಮಹೇಂದ್ರ ರೆಡ್ಡಿಯೇ ಕಾರಣ. ಕೃತ್ತಿಕಾ ಸಾವನ್ನಪ್ಪಿದ ದಿನವೇ ನಾವು ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿದರೂ ಭಾವ ಮಹೇಂದ್ರ ಮರಣೋತ್ತರ ಪರೀಕ್ಷೆ ಬೇಡ. ಆಕೆ ಈಗಾಗಲೇ ಅನಾರೋಗ್ಯದಿಂದ ಸಾಕಷ್ಟು ಕಟ್ಟಪಟ್ಟು ಮೃತಪಟ್ಟಿದ್ದಾಳೆ. ಪೋಸ್ಟ್ ಮಾರ್ಟ್ಮ್ ಮೂಲಕ ಮತ್ತೆ ಆಕೆಯ ದೇಹಕ್ಕೆ ಹಾನಿಯಾಗುವುದು ಬೇಡ ಎಂದು ನಾಟಕ ಮಾಡಿದ್ದ. ಆದಾಗ್ಯೂ ನಾವು ಪೊಲೀಸರಿಗೆ ತಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೆವು. ತನಿಖೆ ವೇಳೆ ಮಹೇಂದ್ರನ ಅಕ್ರಮ ಸಂಬಂಧ ಬಯಲಾಗಿದೆ.

ಕೃತ್ತಿಕಾ ಕ್ಲಿನಿಕ್ ತೆಗೆಯಲು ಮುಂದಾಗಿದ್ದಳು. ಆದರೆ ಮಹೇಂದ್ರ ತಡೆಯುತ್ತಿದ್ದ. ಮ್ಯಾರೇಜ್ ಸರ್ಟಿಫಿಕೆಟ್ ಮಾಡಿಸಲು ಬಿಡುತ್ತಿರಲಿಲ್ಲ. ಕೃತ್ತಿಕಾಗೆ ಅಂತಹ ಯಾವುದೇ ಅನಾರೋಗ್ಯವಿರಲಿಲ್ಲ. ಸಹಜವಾಗಿ ಆರೋಗ್ಯ ಸಮಸ್ಯೆದಾಗಲೂ ತಾನೇ ಆಕೆಗೆ ಡ್ರಿಪ್ಸ್ ಹಾಕುತ್ತಿದ್ದ. ಮಹೇಂದ್ರ ಹಲವು ಬಾರಿ ನನಗೆ ಅನಗತ್ಯ ಔಷಧಗಳನ್ನು ಕೊಡುತ್ತಿರುವುದಾಗಿ ಅಕ್ಕ ಹೇಳುತ್ತಿದ್ದಳು. ಈಗ ಎಫ್ ಎಸ್ ಎಲ್ ವರದಿ ಪ್ರಕಾರ ಕೃತ್ತಿಕಾಗೆ ಪ್ರೊಪೊಫೋಲ್ ಎಂಬ ಅನಸ್ತೇಷಿಯಾ ಇಂಜಕ್ಷನ್ ನೀಡಲಾಗಿದೆ. ಅನಸ್ತೇಷಿಯಾ ಡೋಸ್ ಜಾಸ್ತಿ ಕೊಟ್ಟು ಹತ್ಯೆ ಮಾಡಿರುವುದು ದೃಢವಾಗಿದೆ ಎಂದು ತಿಳಿಸಿದ್ದಾರೆ. ನಾವು ಇಬ್ಬರು ಹೆಣ್ಣು ಮಕ್ಕಳು ಹಾಗಾಗಿ ಮಹೇಂದ್ರನನ್ನು ತಂದೆ-ತಾಯಿ ಮಗನಂತೆ ನೋಡಿಕೊಳ್ಳುತ್ತಿದ್ದರು. ಆಸ್ತಿ ಆಸೆ ಹಾಗೂ ಅಕ್ರಮ ಸಂಬಂಧಕ್ಕೆ ಅಕ್ಕನನ್ನು ಇಂಜಕ್ಷನ್ ಕೊಟ್ಟು ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read