ಪೂರಿ ಜಗನ್ನಾಥ ನಿರ್ದೇಶನದ ರಾಮ್ ಪೋತಿನೇನಿ ಅಭಿನಯದ ಬಹು ನಿರೀಕ್ಷಿತ ‘ಡಬಲ್ iSMART’ ಚಿತ್ರದ ಮೂರನೇ ಗೀತೆಯನ್ನು ಇಂದು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಕ್ಯಾ ಲಫ್ಡಾ ಎಂಬ ಈ ಹಾಡಿಗೆ ಧನುಂಜಯ್ ಸೀಪಾನ ಮತ್ತು ಸಿಂಧುಜಾ ಶ್ರೀನಿವಾಸನ್ ಧ್ವನಿಯಾಗಿದ್ದು, ಮಣಿ ಶರ್ಮಾ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಶ್ರೀ ಹರ್ಷ ಎಮಾನಿ ಅವರ ಸಾಹಿತ್ಯವಿದೆ.
ಈ ಚಿತ್ರದಲ್ಲಿ ರಾಮ್ ಪೋತಿನೇನಿ ಕಾವ್ಯ ಥಾಪರ್, ಸಂಜಯ್ ದತ್ ಸೇರಿದಂತೆ ಬನಿ ಜೆ, ಅಲಿ, ಗೆಟಪ್ ಶ್ರೀನು, ಸಯಾಜಿ ಶಿಂಧೆ, ಮಕರಂದ್ ದೇಶಪಾಂಡೆ, ಟೆಂಪರ್ ವಂಶಿ ಬಣ್ಣ ಹಚ್ಚಿದ್ದಾರೆ. ಪುರಿ ಕನೆಕ್ಟ್ಸ್ ಬ್ಯಾನರ್ ನಡಿ ಪೂರಿ ಜಗನ್ನಾಥ್ ಹಾಗೂ ಚಾರ್ಮ್ಮ್ ಕೌರ್ ಬಂಡವಾಳ ಹೂಡಿದ್ದಾರೆ. ಕಾರ್ತಿಕ ಶ್ರೀನಿವಾಸ್ ಸಂಕಲನ ಹಾಗೂ ಸ್ಯಾಮ್ ಕೆ ನಾಯ್ಡು, ಗಿಯಾನಿ ಗಿಯಾನ್ನೆಲ್ಲಿ ಅವರ ಛಾಯಾಗ್ರಹಣ, ಕೆಚಕ್ ಖಾಮ್ ಮತ್ತು ರಿಯಲ್ ಸತೀಶ್ ಸಾಹಸ ನಿರ್ದೇಶನವಿದೆ.