ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಚಾರ ಕಾರ್ಯದಲ್ಲಿರುವ ಪ್ರಧಾನಿ ಮೋದಿ ಮಂಗಳವಾರ ರೋಡ್ ಶೋಗೂ ಮುನ್ನ ಮಕ್ಕಳೊಂದಿಗೆ ನಡೆಸಿದ ಸಂಭಾಷಣೆ ವೈರಲ್ ಆಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೃಹತ್ ರೋಡ್ ಶೋ ನಡೆಸಿದರು. ಅದಕ್ಕೂ ಮೊದಲು ಅವರು ತಮ್ಮನ್ನು ಕಾತುರದಿಂದ ನೋಡ್ತಿದ್ದ ಪುಟ್ಟ ಮಕ್ಕಳೊಂದಿಗೆ ಸಂಭಾಷಣೆ ನಡೆಸಿದರು.
ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ಪ್ರಧಾನಿ ಮೋದಿ ಮಕ್ಕಳಿಗೆ “ನೀವೆಲ್ಲರೂ ಶಾಲೆಗೆ ಹೋಗುತ್ತೀರಾ” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಮಕ್ಕಳು “ಹೌದು ಸಾರ್ ” ಎಂದು ಉತ್ತರಿಸಿದರು. ನಂತರ ಅವರೊಡನೆ ಕೆಲಕಾಲ ತಮಾಷೆ ಮಾಡುತ್ತಾ, ಚೆನ್ನಾಗಿ ಓದಿಕೊಳ್ಳುವಂತೆ ಸಲಹೆ ನೀಡಿದ ಮೋದಿ, ನೀವು ಏನಾಗಲು ಬಯಸುತ್ತೀರ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಮಕ್ಕಳಲ್ಲಿ ಕೆಲವರು ನಾನು ಡಾಕ್ಟರ್ ಆಗುತ್ತೀನಿ, ನಾನು ಪೊಲೀಸ್ ಆಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಬಾಲಕ ನಾನು ನಿಮ್ಮ ಸೆಕ್ಯುರಿಟಿ ಆಗಲು ಬಯಸುತ್ತೇನೆ ಎಂದಾಗ ನಕ್ಕ ಮೋದಿ ನೀನು ಪ್ರಧಾನಿಯಾಗಬೇಕೆಂದು ಯೋಚಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮಕ್ಕಳೊಂದಿಗೆ ಪ್ರಧಾನಿ ಮೋದಿ ಮಾತುಕತೆಯ ಈ ತಮಾಷೆಯ ವಿಡಿಯೋ ವೈರಲ್ ಆಗಿದೆ.
https://twitter.com/ANI/status/1653415984626298883?ref_src=twsrc%5Etfw%7Ctwcamp%5Etweetembed%7Ctwterm%5E1653415984626298883%7Ctwgr%5E309d3c00eabea17c6950c4f495421b348c26be16%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fdontyouthinkofbecomingpmmodiinteractswithkidsaheadofroadshowinkarnatakaskalaburagiwatch-newsid-n495846784
https://twitter.com/ANI/status/1653385557324742656?ref_src=twsrc%5Etfw%7Ctwcamp%5Etweetembed%7Ctwterm%5E16533855573247426