ʼವ್ಯಾಕ್ಸಿಂಗ್ʼ ಮಾಡಿದ ತಕ್ಷಣ ಅಪ್ಪಿತಪ್ಪಿ ಮಾಡಬೇಡಿ ಈ ಕೆಲಸ…..!

ಸುಂದರ ಹಾಗೂ ಸೆಕ್ಸಿ ಲುಕ್ ಗಾಗಿ ಅನೇಕರು ವ್ಯಾಕ್ಸಿಂಗ್ ಮಾಡಿಸಿಕೊಳ್ತಾರೆ. ವ್ಯಾಕ್ಸಿಂಗ್ ಮಾದಕತೆಯನ್ನು ಹೆಚ್ಚಿಸುತ್ತದೆ. ಸ್ಲಿವ್ಲೆಸ್ ಟಾಪ್ ಹಾಗೂ ಸ್ಕರ್ಟ್ ಧರಿಸುವ ಮೊದಲು ವ್ಯಾಕ್ಸಿಂಗ್ ಮಾಡಿದ್ರೆ ಬೆಸ್ಟ್ ಎಂದು ಸೌಂದರ್ಯ ತಜ್ಞರು ಕೂಡ ಸಲಹೆ ನೀಡ್ತಾರೆ. ಬ್ಯೂಟಿ ಪಾರ್ಲರ್ ಗೆ ಹೋಗಿ ಅನೇಕರು ವ್ಯಾಕ್ಸಿಂಗ್ ಮಾಡಿಸಿಕೊಂಡು ಬರ್ತಾರೆ. ಆದ್ರೆ ಗೊತ್ತಿಲ್ಲದೆ ವ್ಯಾಕ್ಸಿಂಗ್ ನಂತ್ರ ಸೌಂದರ್ಯ ವರ್ಧನೆಗೆ ಮಾಡುವ ಕೆಲಸ ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ವ್ಯಾಕ್ಸಿಂಗ್ ಮಾಡಿದ ನಂತ್ರ ನಿಮ್ಮ ಚರ್ಮದಲ್ಲಿರುವ ತೇವಾಂಶ ಕಡಿಮೆಯಾಗುತ್ತದೆ. ಹಾಗಾಗಿ ವ್ಯಾಕ್ಸಿಂಗ್ ಮಾಡಿದ ನಂತ್ರ ಪ್ರತಿ ದಿನ ನೀವು ತೇವಾಂಶ ಹೆಚ್ಚಿಸುವ ಕ್ರೀಂ ಬಳಸಬೇಕಾಗುತ್ತದೆ.

ವ್ಯಾಕ್ಸಿಂಗ್ ಮಾಡಿದ ಮೊದಲ 2 ದಿನ ವ್ಯಾಯಾಮ ಮಾಡಬೇಡಿ. ವ್ಯಾಕ್ಸಿಂಗ್ ನಂತ್ರ ಚರ್ಮದ ರಂಧ್ರಗಳು ತೆರೆದಿರುತ್ತವೆ. ವ್ಯಾಯಾಮದ ವೇಳೆ ಬೆವರಿನ ಮೂಲಕ ಬರುವ ದೇಹದ ಕೊಳಕು ರಂಧ್ರಗಳ ಮೂಲಕ ಮತ್ತೆ ಒಳ ಸೇರುವ ಸಾಧ್ಯತೆಗಳಿರುತ್ತವೆ.

ವ್ಯಾಕ್ಸಿಂಗ್ ನಂತ್ರ ಸ್ನಾನ ಮಾಡಲು ಬಯಸಿದ್ರೆ ಶವರ್ ಬಳಸಿ. ವ್ಯಾಕ್ಸಿಂಗ್ ನಂತ್ರ ಹೆಚ್ಚು ನೀರಿನ ಬಳಕೆ ನಿಮ್ಮ ಚರ್ಮಕ್ಕೆ ಹಾನಿಯುಂಟು ಮಾಡಬಹುದು.

ವ್ಯಾಕ್ಸಿಂಗ್ ನಂತ್ರ ಬಿಸಿ ನೀರಿನ ಬಳಕೆ ಮಾಡಬೇಡಿ. ಬಿಸಿ ನೀರು ಮೊಡವೆ ಅಥವಾ ಗುಳ್ಳೆಗೆ ಕಾರಣವಾಗುತ್ತದೆ.

ವ್ಯಾಕ್ಸಿಂಗ್ ನಂತ್ರ ತಕ್ಷಣ ಸ್ಕ್ರಬ್ ಬಳಸಬೇಡಿ. ಇದು ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read