ಆಹಾರ ಸೇವಿಸುವಾಗ ಈ ತಪ್ಪನ್ನ ಮಾಡಲೇಬೇಡಿ

ದೇಹದ ಆರೋಗ್ಯ ಸರಿಯಾಗಿ ಇರಬೇಕು ಅಂದರೆ ಆಹಾರ ಸೇವನೆಯತ್ತ ನೀವು ಗಮನ ಕೊಡಲೇಬೇಕು. ನಿಮ್ಮ ಆಹಾರ ಸೇವನೆ ಕ್ರಮ ಸರಿಯಾಗಿ ಇಲ್ಲ ಅಂದರೆ ಆರೋಗ್ಯವೂ ಕೈ ಕೊಟ್ಟಂಗೆ.

ಆಹಾರ ಸೇವನೆ ಮಾಡೋದ್ರ ಜೊತೆಗೆ ಯಾವ ಕ್ರಮದಲ್ಲಿ ಆಹಾರ ಸೇವನೆ ಮಾಡಬೇಕು ಅನ್ನೋದನ್ನೂ ತಿಳಿದುಕೊಳ್ಳಬೇಕು.

ವೇದ ಹಾಗೂ ಪುರಾಣಗಳಲ್ಲಿ ಇರುವ ಮಾಹಿತಿ ಪ್ರಕಾರ ಸರಿಯಾದ ಸಮಯಕ್ಕೆ ಆಹಾರವನ್ನ ಸೇವಿಸಿ. ಇನ್ನು ಆರೋಗ್ಯ ಸಮಸ್ಯೆ ಹೊಂದಿರುವವರ ತಾಟಿನಿಂದ ಎಂದಿಗೂ ಆಹಾರವನ್ನ ಪಡೆಯಬೇಡಿ. ಹಾಗೂ ನೀವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಬೇರೆಯವರಿಂದ ಆಹಾರ ಪಡೆಯಬೇಡಿ.

ದೇಹಕ್ಕೆ ಎಷ್ಟು ಬೇಕೋ ಅಷ್ಟೇ ಆಹಾರವನ್ನ ಸೇವಿಸಿ. ಅಗತ್ಯಕ್ಕಿಂತ ಹೆಚ್ಚು ಇಲ್ಲವೇ ಕಡಿಮೆ ಆಹಾರವನ್ನ ಸೇವಿಸಬೇಡಿ. ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸ್ಥೂಲ ಕಾಯ ಹಾಗೂ ಸೋಮಾರಿತನಕ್ಕೆ ಕಾರಣವಾಗಬಹುದು. ಕಡಿಮೆ ಪ್ರಮಾಣದ ಆಹಾರ ಸೇವನೆ ಮಾಡೋದ್ರಿಂದ ಸುಸ್ತು, ನಿತ್ರಾಣ ಉಂಟಾಗಬಹುದು.
ಊಟವಾದ ಬಳಿಕ ಕೈ ಹಾಗೂ ಬಾಯಿಯನ್ನ ತೊಳೆಯದೇ ಎಲ್ಲಿಗೂ ಹೊರಹೋಗಬೇಡಿ. ಕೈನಿಂದ ಬೀಳುವ ಅಗಳು ಮನೆಯನ್ನ ಅಶುದ್ಧ ಮಾಡಬಹುದು. ಮನೆ ಅಪವಿತ್ರವಾದರೆ ಅದು ಮನೆ ಸದಸ್ಯರ ಮೇಲೆ ಕೆಟ್ಟ ಪ್ರಭಾವ ಬೀರಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read