ಹನಿಮೂನ್‌ ಗೆ ಹೋಗುವಾಗ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು…..!

ಮದುವೆಯಾದ ಹೊಸದರಲ್ಲಿ ಹನಿಮೂನ್‌ ಗೆ ಹೋಗುವ ದಂಪತಿಗಳು ತುಂಬಾನೇ ಉತ್ಸುಕರಾಗಿರುತ್ತಾರೆ. ಮದುವೆಗೆ ನೀವು ಹೇಗೆ ಪ್ಲಾನ್‌ ಮಾಡಿರ್ತೀರೋ ಅದೇ ರೀತಿ ಹನಿಮೂನ್‌ ಗೂ ಪ್ಲಾನ್‌ ಮಾಡಬೇಕು. ಇಲ್ಲದೇ ಇದ್ರೆ ನಂತರ ನೀವು ಪಶ್ಚಾತ್ತಾಪ ಪಡಬೇಕಾಗಿ ಬರಬಹುದು.

ಕೊನೆಯ ಕ್ಷಣದಲ್ಲಿ ಹನಿಮೂನ್‌ ಗೆ ಯಾವುದಾದರೂ ಸ್ಥಳವನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಸಂಗಾತಿಗೆ ಸರ್ಪೈಸ್‌ ಕೊಡಬೇಕು ಎಂದುಕೊಳ್ಳಬೇಡಿ. ಹಾಗೆ ಮಾಡುವುದರಿಂದ ಯಡವಟ್ಟಾಗುವ ಸಾಧ್ಯತೆಯೇ ಹೆಚ್ಚು. ಹನಿಮೂನ್ ಅನ್ನು ಆತುರದಲ್ಲಿ ಯೋಜಿಸಬೇಡಿ.

ಅವಸರ ಮಾಡಿದ್ರೆ ಆತುರದ ಪ್ಲಾನಿಂಗ್ ನಿಂದಾಗಿ ಕೆಲವು ವಿಷಯಗಳು ಮರೆತು ಹೋಗುತ್ತವೆ. ಆದ್ದರಿಂದ ಹನಿಮೂನ್‌ಗೆ ಹೋಗುವ ಮೊದಲು ಎಲ್ಲವನ್ನೂ ಕರೆಕ್ಟಾಗಿ ಯೋಜಿಸಿಕೊಳ್ಳಿ. ಯಾವುದನ್ನೂ ಮರೆಯದಂತೆ ಎಚ್ಚರ ವಹಿಸಿ. ಹೋಟೆಲ್‌ ಕೋಣೆಯನ್ನು ಮೊದಲೇ ಬುಕ್ಕಿಂಗ್‌ ಮಾಡಿದರೆ ಹೆಚ್ಚು ಖರ್ಚು ಮಾಡಬೇಕಿಲ್ಲ.

ಅನೇಕರು ತಮ್ಮ ಮಧುಚಂದ್ರದ ಬಗ್ಗೆ ತುಂಬಾ ಉತ್ಸುಕರಾಗಿರ್ತಾರೆ, ಆದ್ರೆ ಮುಂಚಿತವಾಗಿ ಬುಕ್ ಮಾಡುವುದಿಲ್ಲ. ಕೊನೆ ಕ್ಷಣದಲ್ಲಿ ಬುಕ್ಕಿಂಗ್‌ ಮಾಡಲು ಹೋದರೆ ಸಮಯ ವ್ಯರ್ಥವಾಗುತ್ತದೆ. ಹನಿಮೂನ್‌ ಗೆ ಎಲ್ಲಿಗೆ ಹೋಗಬೇಕು ಎಂಬುದರ ಬಗ್ಗೆ ಸಂಗಾತಿಯ ಸಲಹೆ ಕೂಡ ಬಹುಮುಖ್ಯ.

ಪರಸ್ಪರ ಚರ್ಚಿಸಿ ನಿರ್ಧಾರ ಮಾಡಿ. ಕೆಲವರು ಸಂಗಾತಿಯನ್ನು ಕೇಳದೆಯೇ ಎಲ್ಲೆಲ್ಲಿಗೆ ಹೋಗಬೇಕು ಎಂಬುದನ್ನೆಲ್ಲ ನಿರ್ಧರಿಸಿ ಬಿಡುತ್ತಾರೆ. ಅದೇನಾದ್ರೂ ನಿಮ್ಮ ಪಾರ್ಟ್‌ ನರ್‌ ಗೆ ಇಷ್ಟವಾಗದೇ ಇದ್ದಲ್ಲಿ ಹನಿಮೂನ್‌ ನಲ್ಲೂ ಜಗಳ ಮಾಡಬೇಕಾಗಿ ಬರಬಹುದು. ಮಧುಚಂದ್ರದ ಆನಂದವನ್ನು ಅನುಭವಿಸಲು ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read