ವಿಸ್ಕಿ ಮತ್ತು ಬಿಯರ್‌ನೊಂದಿಗೆ ಇವುಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ.…!

ಆಲ್ಕೋಹಾಲ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದು ಗೊತ್ತಿದ್ದೂ ಮದ್ಯ ಸೇವಿಸುವವರ ಸಂಖ್ಯೆ ಬಹಳ ಹೆಚ್ಚಿದೆ. ಅಲ್ಕೋಹಾಲ್‌ ಜೊತೆಗೆ ಕೆಲವೊಂದು ವಸ್ತುಗಳ ಸೇವನೆ ಇನ್ನೂ ಅಪಾಯಕಾರಿ. ವಿಶೇಷವಾಗಿ ನೀವು ಮಲಬದ್ಧತೆಯ ಸಮಸ್ಯೆಯನ್ನು ಹೊಂದಿದ್ದರೆ ಮದ್ಯದ ಜೊತೆಗೆ ಕೆಲವು ತಿನಿಸುಗಳನ್ನು ಸೇವನೆ ಮಾಡಬಾರದು.

ಅಲ್ಕೋಹಾಲ್‌ ಜೊತೆಗೆ ಅಥವಾ ಮದ್ಯ ಸೇವನೆಯ ನಂತರ ಹಂದಿ ಮಾಂಸವನ್ನು ತಿನ್ನಬಾರದು. ಏಕೆಂದರೆ ಇದು ಅಸಿಡಿಟಿ ಸಮಸ್ಯೆಗಳಿಗೆ ಕಾರಣವಾಗಬಹುದು. ಮದ್ಯ ಸೇವನೆಯ ನಂತರ ಹಸಿವಾದರೆ ಫೈಬರ್‌ಯುಕ್ತ ಆರೋಗ್ಯಕರ ಆಹಾರವನ್ನು ಸೇವಿಸಬಹುದು.

ಬ್ರೆಡ್ ಮತ್ತು ಕೇಕ್ – ಕೇಕ್, ಪೇಸ್ಟ್ರಿ, ಬ್ರೆಡ್ ಉತ್ಪನ್ನಗಳು ಯೀಸ್ಟ್ ಅನ್ನು ಒಳಗೊಂಡಿರುತ್ತವೆ. ಇದನ್ನು ಮದ್ಯದ ಜೊತೆಗೆ ಸೇವಿಸಬಾರದು ಏಕೆಂದರೆ ಆಲ್ಕೋಹಾಲ್ ಸಹ ಯೀಸ್ಟ್ ಅನ್ನು ಹೊಂದಿರುತ್ತದೆ. ನೀವು ಯೀಸ್ಟ್ ಅನ್ನು ಅತಿಯಾಗಿ ಸೇವಿಸಿದರೆ ನಿಮ್ಮ ಹೊಟ್ಟೆಯು ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬಿಯರ್‌ ಅಥವಾ ವಿಸ್ಕಿ ಜೊತೆಗೆ ಬ್ರೆಡ್ ಮತ್ತು ಕೇಕ್ ತಿನ್ನಬೇಡಿ.

ಚಾಕಲೇಟ್‌: ಚಾಕಲೇಟ್‌ನಲ್ಲಿರುವ ಕೆಫೀನ್ ಮತ್ತು ಕೋಕೋ ಆಲ್ಕೋಹಾಲ್‌ನೊಂದಿಗೆ ಸೇರಿದಾಗ ಹೊಟ್ಟೆಯನ್ನು ಕೆಡಿಸಬಹುದು. ನಿಮಗೆ ಸಿಹಿ ತಿನ್ನಬೇಕು ಅನಿಸಿದರೆ ಚಾಕಲೇಟ್ ಬದಲು ಕಡಲೆ ಹಿಟ್ಟಿನಿಂದ ಮಾಡಿದ ಸಿಹಿ ತಿನ್ನಬಹುದು.

ಡೈರಿ ಉತ್ಪನ್ನಗಳು: ನಿಮಗೆ ಪ್ರತಿದಿನ ಕುಡಿತದ ಅಭ್ಯಾಸವಿದ್ದರೆ ಡೈರಿ ಉತ್ಪನ್ನಗಳನ್ನು ಜೊತೆಗೆ ಸೇವನೆ ಮಾಡಬೇಡಿ. ಏಕೆಂದರೆ ಮದ್ಯ ಸೇವನೆಯ ನಂತರ ಡೈರಿ ಉತ್ಪನ್ನಗಳನ್ನು ತೆಗೆದುಕೊಂಡರೆ ದೇಹಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read