ಆಕಾಶದಿಂದ ಬೀಳುವುದೆಲ್ಲ ಆಲಿಕಲ್ಲು ಎಂದು ಭಾವಿಸಬೇಡಿ !

ಆಕಾಶದಿಂದ ಮಳೆ ಹನಿಗಳ ಜೊತೆ ಮಂಜುಗಡ್ಡೆ ಉದುರಿದರೆ, ಮಕ್ಕಳು ಅದನ್ನು ಆಡುತ್ತಾ ತಿನ್ನುತ್ತಾ ಖುಷಿಪಡುತ್ತಾರೆ. ಆದರೆ, ಈ ಮಂಜುಗಡ್ಡೆ ವಿಮಾನದಿಂದ ಬೀಳುವ ಮೂತ್ರದ ಮಂಜುಗಡ್ಡೆಯೂ ಆಗಿರಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು, ಇದು ನಿಜ !

ವಿಮಾನಗಳಲ್ಲಿ ಕೊಳಚೆ ಸಂಗ್ರಹಿಸಲು ಟ್ಯಾಂಕ್‌ಗಳಿದ್ದರೂ, ಕೆಲವೊಮ್ಮೆ ಅವುಗಳಿಂದ ತ್ಯಾಜ್ಯ ಹೊರಬರುತ್ತದೆ. 2006 ರಲ್ಲಿ ಆಂಡಿ ಮತ್ತು ಗೇನರ್ ಸ್ವಾನ್ ಎಂಬ ದಂಪತಿಗಳ ಮನೆ ಮುಂದೆ ಇದೇ ರೀತಿಯ ಘಟನೆ ಸಂಭವಿಸಿತ್ತು. ಮಳೆ ಹನಿಗಳ ಜೊತೆ ಮಂಜುಗಡ್ಡೆ ಬಿದ್ದಾಗ, ಅದು ಆಕಾಶದಿಂದ ಬಿದ್ದ ಮಂಜುಗಡ್ಡೆ ಎಂದು ಅವರು ಭಾವಿಸಿದ್ದರು. ಆದರೆ, ಅದು ವಿಮಾನದಿಂದ ಬಿದ್ದ ಮೂತ್ರದ ಮಂಜುಗಡ್ಡೆ ಎಂದು ತಿಳಿದು ಅವರಿಗೆ ಆಶ್ಚರ್ಯವಾಯಿತು.

ವಿಮಾನದಿಂದ ಬೀಳುವ ಈ ಮೂತ್ರದ ಮಂಜುಗಡ್ಡೆಯನ್ನು “ನೀಲಿ ಮಂಜುಗಡ್ಡೆ” ಎಂದು ಕರೆಯುತ್ತಾರೆ. ಇದು ಹಲವು ಬಾರಿ ನೆಲದ ಮೇಲೆ ಬಿದ್ದಿದೆ. ಸ್ಟೆಫಾನಿ ಕೋಲ್ ಎಂಬವರ ಕಾರಿನ ಮೇಲೂ ಮೂತ್ರದ ಮಂಜುಗಡ್ಡೆ ಬಿದ್ದಿದೆ. ಈ ಘಟನೆಗಳಿಂದ ಮಾಲೀಕರಿಗೆ ಅಪಾರ ನಷ್ಟವಾಗಿದೆ, ಆದರೆ ವಿಮಾನಯಾನ ಸಂಸ್ಥೆಗಳಿಂದ ಯಾವುದೇ ಪರಿಹಾರ ಸಿಕ್ಕಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read