ರಾತ್ರಿ ಮಲಗುವ ಮುನ್ನ ಈ 5 ಪದಾರ್ಥಗಳನ್ನು ತಿನ್ನಬೇಡಿ……!

ಅದೆಷ್ಟೋ ಮಂದಿ ತಡರಾತ್ರಿವರೆಗೂ ಎದ್ದಿರುತ್ತಾರೆ. ಲೇಟ್‌ ನೈಟ್‌ ಕೆಲಸ, ಸಿನೆಮಾ ವೀಕ್ಷಣೆ ಅಥವಾ ಜಾಲತಾಣಗಳನ್ನು ಸ್ಕ್ರೋಲ್‌ ಮಾಡುತ್ತ ರಾತ್ರಿ ತಡವಾಗಿ ಮಲಗುವವರಿದ್ದಾರೆ. ಕೆಲವೊಮ್ಮೆ ಮಲಗುವ ಮುನ್ನ ಏನನ್ನಾದರೂ ತಿನ್ನಬೇಕೆಂಬ ಬಯಕೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಕೆಲವೊಂದು ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತೊಂದರೆಯಾಗುತ್ತದೆ.

ಏಕೆಂದರೆ ಆಹಾರವು ನಮ್ಮ ನಿದ್ರೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆದ್ದರಿಂದ ತಡರಾತ್ರಿ ಹೆವಿ ಫುಡ್‌ ತೆಗೆದುಕೊಳ್ಳಬಾರದು. ಜಂಕ್ ಫುಡ್ ಅನ್ನು ಸೇವಿಸಬಾರದು.

ತಡರಾತ್ರಿಯಲ್ಲಿ ಸಂಸ್ಕರಿಸಿದ ಆಹಾರವನ್ನು ಸೇವಿಸದೇ ಇರುವುದು ಉತ್ತಮ. ಸಂಸ್ಕರಿಸಿದ ಆಹಾರಗಳನ್ನು ಮಲಗುವ ಮುನ್ನ ತಿನ್ನುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮಲಗುವ ಮುನ್ನ ಹಸಿ ತರಕಾರಿಗಳ ಸೇವನೆ ಕೂಡ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇವುಗಳ ಸೇವನೆಯಿಂದ ರಾತ್ರಿಯಲ್ಲಿ ಜೀರ್ಣಾಂಗ ವ್ಯವಸ್ಥೆಯ ಕೆಲಸ ನಿಧಾನವಾಗುತ್ತದೆ.

ಇನ್ನು ತಡರಾತ್ರಿ ಮಲಗುವ ಅಭ್ಯಾಸವಿರುವವರು ಆ ಸಮಯದಲ್ಲಿ ಚಾಕೊಲೇಟ್ ಅನ್ನು ಸೇವಿಸಬಾರದು. ಇದು ಒತ್ತಡವನ್ನು ಉಂಟುಮಾಡಬಹುದು. ಅಷ್ಟೇ ಅಲ್ಲ ನಿದ್ರೆಯನ್ನೂ ಕೆಡಿಸಬಹುದು.

ಆಲ್ಕೊಹಾಲ್ ಸೇವನೆಯು ಕೂಡ ಹಾನಿಕಾರಕ. ಇವುಗಳ ಬದಲು ರಾತ್ರಿ ಮಲಗುವ ಮುನ್ನ ಹಸಿವಾದಂತೆನಿಸಿದರೆ ಹಸಿರು ಎಲೆಗಳ ತರಕಾರಿಗಳನ್ನು ಸೇವಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read