ಬೆಳಿಗ್ಗೆ ʼವಾಕಿಂಗ್‌ʼ ತೆರಳುವ ಮುನ್ನ ಈ 5 ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ…!

ಪ್ರತಿದಿನ ವಾಕಿಂಗ್‌ ಮಾಡುವ ಅಭ್ಯಾಸ ಅನೇಕರಿಗಿದೆ. ಬೆಳಗಿನ ವಾಕಿಂಗ್‌ ನಮ್ಮನ್ನು ಫಿಟ್‌ ಆಗಿಡುತ್ತದೆ. ಆದರೆ ಬೆಳಗಿನ ನಡಿಗೆಗೂ ಮುನ್ನ ನಾವು ಮಾಡುವ ಕೆಲವು ತಪ್ಪುಗಳಿಂದ ಅದರ ಸಂಪೂರ್ಣ ಪ್ರಯೋಜನ ದೊರೆಯುವುದಿಲ್ಲ.

ಪ್ರತಿದಿನ ಬೆಳಗಿನ ನಡಿಗೆಗೂ ಮುನ್ನ ಭಾರೀ ಆಹಾರವನ್ನು ಸೇವಿಸಬಾರದು. ಎಷ್ಟೋ ಮಂದಿ ಊಟ ಮಾಡಿದ ನಂತರವೇ ವಾಕಿಂಗ್ ಹೋಗುತ್ತಾರೆ. ಹೀಗೆ ಮಾಡುವುದರಿಂದ ನಮಗೆ ವಿಪರೀತ ಆಯಾಸವಾಗುತ್ತದೆ.

ಬೆಳಗ್ಗೆ ಅಥವಾ ಸಂಜೆ ಯಾವ ಸಮಯದಲ್ಲಿ ವಾಕಿಂಗ್‌ ಹೋಗುವುದಾದರೂ ಅದಕ್ಕೆ ಸೂಕ್ತವಾದ ಬೂಟುಗಳನ್ನು ಆಯ್ಕೆ ಮಾಡಿಕೊಳ್ಳಿ. ಕಂಫರ್ಟ್‌ ಆದ ಬೂಟುಗಳಿದ್ದರೆ ಮಾತ್ರ ಸರಿಯಾಗಿ ವಾಕ್‌ ಮಾಡಲು ಸಾಧ್ಯವಾಗುತ್ತದೆ.

ವಾಕಿಂಗ್‌ಗೆ ತೆರಳುವ ಮುನ್ನ ಚೆನ್ನಾಗಿ ನೀರು ಕುಡಿಯಿರಿ. ಏಕೆಂದರೆ ನಮ್ಮ ದೇಹವು ರಾತ್ರಿಯಿಡೀ ನೀರನ್ನು ಕಳೆದುಕೊಳ್ಳುತ್ತದೆ. ಬೆಳಗ್ಗೆ ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಶಕ್ತಿಯನ್ನು ಕಾಪಾಡಿಕೊಳ್ಳಬಹುದು.

ಬೆಳಗಿನ ನಡಿಗೆ ಅಸ್ತಮಾ ರೋಗಿಗಳಿಗೆ ಹಾನಿಕಾರಕವಾಗಿದೆ. ಅವರು ಯಾವಾಗಲೂ ಮಂಜುಬೆರೆತ ಗಾಳಿಯಿಂದ ದೂರವಿರಬೇಕು. ಅತಿಯಾದ ಹೊಗೆ ಅಥವಾ ಮಾಲಿನ್ಯನ ಕೂಡ ಅಸ್ತಮಾ ಇರುವವರಿಗೆ ಅಪಾಯಕಾರಿ. ಹಾಗಾಗಿ ಈ ಸಮಸ್ಯೆ ಇರುವವರು ಬೇರೆ ಸಮಯದಲ್ಲಿ ವಾಕಿಂಗ್‌ ಮಾಡಬಹುದು.

ಬೆಳಗ್ಗೆ ವಾಕಿಂಗ್‌ಗೆ ತೆರಳುವ ಸಂದರ್ಭದಲ್ಲಿ ದೇಹವನ್ನು ಬೆಚ್ಚಗಿಟ್ಟುಕೊಳ್ಳಿ. ಸ್ವೆಟರ್‌ ಮತ್ತು ಟೋಪಿ ಧರಿಸಲು ಮರೆಯಬೇಡಿ. ದೇಹ ಬೆಚ್ಚಗಿದ್ದರೆ ಆರಾಮಾಗಿ ವಾಕ್‌ ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read